Advertisement

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

04:48 PM Jan 27, 2022 | Team Udayavani |

ಹೊಸದಿಲ್ಲಿ: 1964 ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ತಂಡದ ನಾಯಕ ಚರಣ್ ಜಿತ್ ಸಿಂಗ್ ಅವರಿಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

Advertisement

ದೀರ್ಘಕಾಲದ ವಯೋಸಹಜ ಅನಾರೋಗ್ಯ ಹಾಗೂ ಹೃದಯ ಸ್ತಂಭನದಿಂದ ಚರಣ್ ಜಿತ್ ಸಿಂಗ್ ಅವರು ಹಿಮಾಚಲ ಪ್ರದೇಶದ ಉನಾದಲ್ಲಿನ ತಮ್ಮ ಮನೆಯಲ್ಲಿ ಗುರುವಾರ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

“ಅಪ್ಪ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅವರು ಕೋಲಿನ ಸಹಾಯದಿಂದ ನಡೆಯುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಅವರ ಆರೋಗ್ಯ ಹದಗೆಟ್ಟಿತ್ತು, ಇಂದು ಬೆಳಿಗ್ಗೆ ಅವರು ನಮ್ಮನ್ನು ಅಗಲಿದರು” ಎಂದು ಅವರ ಕಿರಿಯ ಮಗ ವಿ.ಪಿ.ಸಿಂಗ್ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ:ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

1964 ರಲ್ಲಿ ಒಲಿಂಪಿಕ್ ಚಿನ್ನ ವಿಜೇತ ತಂಡದ ನಾಯಕತ್ವದ ಜೊತೆಗೆ, ಅವರು 1960 ರ ಕ್ರೀಡಾಕೂಟದಲ್ಲಿ ಬೆಳ್ಳಿ ವಿಜೇತ ತಂಡದಲ್ಲೂ ಚರಣ್ ಜಿತ್ ಸಿಂಗ್ ಪ್ರಮುಖ ಭಾಗವಾಗಿದ್ದರು. ಅಲ್ಲದೆ ಅವರು 1962 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದಲ್ಲೂ ಆಡಿದ್ದರು.

Advertisement

ಭಾರತೀಯ ಹಾಕಿ ವೈಭವದ ದಿನಗಳಲ್ಲಿ ಚರಣ್ ಜಿತ್ ಸಿಂಗ್ ಅವರು ಮಿಂಚಿದ್ದರು. ಎರಡು ಬಾರಿಯ ಒಲಿಂಪಿಯನ್ ಚರಣ್ ಜಿತ್ 1964 ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿ ಫೈನಲ್‌ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next