Advertisement

ಒಲಿಂಪಿಯನ್‌ ಮಹಿಳಾ ಸೈಕ್ಲಿಸ್ಟ್‌ ಆತ್ಮಹತ್ಯೆ

12:30 AM Mar 12, 2019 | Team Udayavani |

ನ್ಯೂಯಾರ್ಕ್‌:  ರಿಯೋ ಒಲಿಂಪಿಕ್ಸ್‌ ಸೈಕ್ಲಿಂಗ್‌ ಮಹಿಳಾ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ಸ್ಪರ್ಧಿ ಕೆಲ್ಲಿ ಕ್ಯಾಟ್ಲಿನ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆಘಾತಕಾರಿ ವಿಷಯವನ್ನು ಅವರ ಕುಟುಂಬ ಮೂಲಗಳು ಖಚಿತಪಡಿಸಿವೆ.

Advertisement

ಕೆಲ್ಲಿಗೆ 23 ವರ್ಷವಾಗಿತ್ತು. ಕಳೆದ ವರ್ಷ ಸೈಕ್ಲಿಂಗ್‌ ಅವಘಡವೊಂದರಲ್ಲಿ ಕಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಘಟನೆಯ ಬಳಿಕ ಕೆಲ್ಲಿ ತೀವ್ರ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕಳೆದ ಜನವರಿಯಲ್ಲಿ ಒಂದು ಸಲ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಆಗ ಅವರನ್ನು ಬಚಾವ್‌ ಮಾಡಲಾಗಿತ್ತು. ಇದೀಗ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಕ್ಯಾಟಿನ್‌ ಸತತ 3 ಬಾರಿ ವಿಶ್ವ ಚಾಂಪಿಯನ್‌ ಸೈಕ್ಲಿಂಗ್‌ ಪ್ರಶಸ್ತಿ ಗೆದ್ದಿದ್ದರು. ಮಾತ್ರವಲ್ಲ ಪ್ರೊ ಸೈಕ್ಲಿಂಗ್‌ ತಂಡವನ್ನೂ ಪ್ರತಿನಿಧಿಸಿದ್ದರು. ಅವರು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಕಾಂಪ್ಯೂಟೇಶನಲ್‌ ಮ್ಯಾಥಮ್ಯಾಟಿಕ್ಸ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next