ಹೊಸದಿಲ್ಲಿ: 2016 ಏಪ್ರಿಲ್‌ಗೂ ಮುನ್ನ ಪಡೆದ ಎಲ್ಲ ಗೃಹ ಸಾಲಗಳ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆಯಿದೆ. 2016ರ ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದ ಸಾಲ ದರ ಆಧರಿತ ಫಂಡ್‌ಗಳ ನಿರ್ವಹಣಾ ವೆಚ್ಚ (ಎಂಸಿಎಲ್‌ಆರ್) ಎಲ್ಲ ಸಾಲಗಳಿಗೂ ಅನ್ವಯವಾಗುತ್ತಿರಲಿಲ್ಲ. ಹಳೆಯ ಸಾಲಗಳಿಗೆ ಹೊಸ ಬಡ್ಡಿ ದರ ನೀತಿ ಅಳವಡಿಕೆ ನಿರ್ಧಾರವನ್ನು ಬ್ಯಾಂಕ್‌ಗಳ ಮರ್ಜಿಗೆ ಬಿಡಲಾಗಿತ್ತು. ಬಹುತೇಕ ಹಳೆಯ ಸಾಲವು ಹಳೆಯ ಬಡ್ಡಿ ದರ ಆಧಾರದಲ್ಲೇ ಮುಂದುವರಿದಿದ್ದು, ಎಂಸಿಎಲ್‌ಆರ್‌ಗೂ ಹಳೆಯ ವಿಧಾನದ ಬಡ್ಡಿ ದರದ ಮಧ್ಯೆ ವ್ಯತ್ಯಾಸ ಹೆಚ್ಚಿದೆ. ಹೀಗಾಗಿ ಹಳೆಯ ವಿಧಾನದ ಬಡ್ಡಿ ದರದ ಲೆಕ್ಕಾಚಾರವನ್ನೂ ಎಂಸಿಎಲ್‌ಆರ್ ಆಧಾರದಲ್ಲೇ ಮಾಡಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ಹೊರಡಿಸುವ ನಿರೀಕ್ಷೆಯಿದೆ. ಇದರಿಂದಾಗಿ ಹಳೆಯ ವಿಧಾನದ ಬಡ್ಡಿ ದರವು ಇಳಿಕೆಯಾಗಲಿದ್ದು, ಗೃಹ ಸಾಲದ ಬಡ್ಡಿ ದರ ಕಡಿಮೆಯಾಗಲಿದೆ. ಈ ವಿಚಾರವನ್ನು ರೆಪೋ ದರ ಪ್ರಕಟಿಸುವ ವೇಳೆ, ಬುಧವಾರ ಆರ್‌ಬಿಯ ಡೆಪ್ಯುಟಿ ಗವರ್ನರ್ ಎನ್.ಎಸ್.ವಿಶ್ವನಾಥನ್ ಹೇಳಿದ್ದಾರೆ.