Advertisement

ಹಳೆ ವಾಹನಗಳ ತೆರವು: ಪೊಲೀಸ್‌ ಠಾಣೆ ಕಟ್ಟಡ ಶೀಘ್ರ?

12:39 PM Mar 25, 2018 | Team Udayavani |

ಉಪ್ಪಿನಂಗಡಿ: ನೂತನ ಕಟ್ಟಡದ ನಿರೀಕ್ಷೆಯಲ್ಲಿರುವ ಉಪ್ಪಿನಂಗಡಿಯ ಪೊಲೀಸ್‌ ಠಾಣೆ ವಠಾರದಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆ ವಶದಲ್ಲಿರುವ ವಾಹನಗಳ ತೆರವು ಕಾರ್ಯ ಗುರುವಾರ ನಡೆದಿದ್ದು, ನೂತನ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳುವ ಲಕ್ಷಣಗಳು ಗೋಚರಿಸಿವೆ.

Advertisement

ನೂತನ ಪೊಲೀಸ್‌ ಠಾಣೆ ಕಟ್ಟಡದ ನಿರ್ಮಾಣಕ್ಕೆ ಸರಕಾರ 90 ಲಕ್ಷ ರೂ. ಮಂಜೂರು ಮಾಡಿದೆ. ತತ್‌ಕ್ಷಣವೇ ಹಳೇ ಕಟ್ಟಡವನ್ನು ತೆರವುಗೊಳಿಸಿ ಕಾಮಗಾರಿ ಪ್ರಾರಂಭಕ್ಕೆ ನಿವೇಶನವನ್ನು ಬಿಟ್ಟು ಕೊಡಬೇಕೆಂದು ರಾಜ್ಯ ಹೌಸಿಂಗ್‌ ಬೋರ್ಡ್‌ನಿಂದ ಬಂದ ಸತತ ಒತ್ತಡದಿಂದಾಗಿ 2017ರ ನ. 11ರಂದು ಕಟ್ಟಡ ತೆರವುಗೊಳಿಸಿ ಸಮೀಪದಲ್ಲಿರುವ ವೃತ್ತ ನಿರೀಕ್ಷಕರ ವಸತಿ ಗೃಹಕ್ಕೆ ಪೊಲೀಸ್‌ ಠಾಣೆಯನ್ನು ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು.

ಆದರೆ ತೆರವುಗೊಳ್ಳುವ ತನಕ ಗಡಿಬಿಡಿ ಮಾಡುತ್ತಿದ್ದ ಹೌಸಿಂಗ್‌ ಬೋರ್ಡ್‌ ಬಳಿಕ ಮೌನ ವಹಿಸಿತು. ಪ್ರಶ್ನಿಸಿದಾಗಲೆಲ್ಲ ಅನುದಾನ ಮಂಜೂರಾಗಲೇ ಇಲ್ಲವೆಂಬ ಧ್ವನಿಯೂ ಕೇಳಿ ಬಂದಿತ್ತು. ಇದೀಗ ಹೌಸಿಂಗ್‌ ಬೋರ್ಡ್‌ ಮೂಲಕ ಕಾಮಗಾರಿಯ ಹೊಣೆ ವಹಿಸಿಕೊಂಡಿರುವ ಕುಂದಾಪುರ ಮೂಲದ ಗುತ್ತಿಗೆದಾರರು ಶುಕ್ರವಾರದಿಂದ ನೂತನ ಪೊಲೀಸ್‌ ಠಾಣೆ ಕಟ್ಟಡದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next