Advertisement

ಹಳೆಯಂಗಡಿ: ಸಂಚಾರ ಬದಲಾವಣೆಗೆ ನಾಗರಿಕರ ಅಸಮಾಧಾನ

07:33 PM May 22, 2019 | Sriram |

ಹಳೆಯಂಗಡಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಯ ಹಿನ್ನೆಲೆಯಲ್ಲಿ ಮೇ 23ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಿದ್ದು ಹಳೆಯಂಗಡಿಯಲ್ಲಿ ಇದರ ವಿರುದ್ಧ ನಾಗರಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

Advertisement

ಉಡುಪಿಯಿಂದ ಬರುವ ಘನ ವಾಹನಗಳು ಮೂಲ್ಕಿಯಿಂದ ಬಜಪೆಯಾಗಿ ಮಂಗಳೂರಿಗೆ ತೆರಳಬೇಕು, ಲಘು ವಾಹನಗಳು ಚೇಳಾçರು ಕ್ರಾಸ್‌ನಿಂದ ಎಡಕ್ಕೆ ತಿರುಗಿ ಮಧ್ಯ ಪ್ರದೇಶದ ಮುಖೇನ ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿಯನ್ನು ತಲುಪಬೇಕು ಎಂದು ಇಲಾಖೆ ಸೂಚಿಸಿದೆ. ಇದಕ್ಕಾಗಿ ಪಾವಂಜೆ ಸೇತುವೆಯ ಮುಂಭಾಗದ ಚೇಳಾçರು ಕ್ರಾಸ್‌ನಲ್ಲಿ ಸಾಕಷ್ಟು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಐದು ಕಿ.ಮೀ. ದೂರ
ಮೂಲ್ಕಿ,ಹಳೆಯಂಗಡಿಯವರೆಗೆ ಒಂದು ರೀತಿಯ ಸಂಚಾರದ ವ್ಯವಸ್ಥೆಯಾಗಿದ್ದರೆ ಸಸಿಹಿತ್ಲು,ಮುಕ್ಕದ ಜನತೆಯು ಹೇಗೆ ಸಂಚರಿಸಬೇಕು ಎಂದು ಸೂಚಿಸಿಲ್ಲ.ಸಸಿಹಿತ್ಲು, ಮುಕ್ಕದವರು ಚೇಳಾçರು ಮೂಲಕವೇ ಸುತ್ತಿ ಬಳಸಿ ಮಂಗಳೂರಿಗೆ ಬರ ಬೇಕು ಎನ್ನಲಾಗಿದೆ. ಕೇವಲ ಒಂದು ಕಿ.ಮೀ. ದೂರಕ್ಕೆ ಇಲ್ಲಿನ ಪ್ರಯಾಣಿಕರು ಐದು ಕಿ.ಮೀ. ದೂರವನ್ನು ಕ್ರಮಿಸಬೇಕಾಗಿದೆ.

ಸಂಚಾರಿ ಇಲಾಖೆಯು ಈಗಾಗಲೇ ಚೇಳಾçರು ಕ್ರಾಸ್‌ನಲ್ಲಿ ಹೊಸದಾಗಿ ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ಇಟ್ಟಿದೆ. ಆದರೆ ಇಲ್ಲಿ ರುವ ಅವೈ ಜಾ nನಿಕ ತಿರುವಿನ ಬಗ್ಗೆ ಮಾಹಿತಿ ತಿಳಿದ ಮೂಲ್ಕಿ ಪೊಲೀ ಸರು ಹಳೆಯಂಗಡಿಯಲ್ಲಿಯೇ ಸಾಧ್ಯವಾದಷ್ಟು ಲಘು ವಾಹನಗಳನ್ನು ಪಕ್ಷಿಕೆರೆಬಲವಿನಗುಡ್ಡೆ,ಶಿಬರೂರು ರಸ್ತೆಯಾಗಿ ಸುರತ್ಕಲ್‌ ತಲುಪಲು ಸೂಚಿಸಲಾಗುವುದು ಎಂದಿದ್ದಾರೆ.

ಸಂಚಾರಿ ವ್ಯವಸ್ಥೆಯ ಬದಲಾವಣೆ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಆದಷ್ಟು ಸಂಚಾರಿ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯತ್ನ ನಡೆಸುತ್ತೇವೆ, ವಾಹನಗಳ ಮಾಲಕರು,ಚಾಲಕರು ಸಹ ಸಹಕರಿಸಿದರೆ ಎಲ್ಲವೂ ಸುಸೂತ್ರವಾಗಿ ನಿಯಂತ್ರಣ ಸಾಧ್ಯವಿದೆ ಎಂದು ಇಲ್ಲಿ ನಿಯೋ ಜಿಸಲ್ಪಟ್ಟ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Advertisement

ಸಮಸ್ಯೆಗಳು
ಸಂಚಾರದ ನಿಯಂತ್ರಣದ ವೇಳೆ ಚೇಳಾçರು ಕ್ರಾಸ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ.ಇಲ್ಲಿ ಹೆದ್ದಾರಿಯಿಂದ ಎಡಬದಿಗೆ ವಾಹನಗಳು ತಿರುಗಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಹೀಗಾಗಿ ವಾಹನಗಳ ದಟ್ಟಣೆಯಾಗುವ ಸಾಧ್ಯತೆ ಇದೆ. ಈ ರಸ್ತೆಯು ಕಿರುದಾಗಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಕಿನ್ನಿಗೋಳಿ ಮೂಲಕ ಸಂಚರಿಸುವ ಘನವಾಹನಗಳು ಗುರುವಾರ ವಾರದ ಸಂತೆಯನ್ನು ದಾಟಿಕೊಂಡು ಅದರ ದಟ್ಟಣೆಯನ್ನು ನಿಭಾಯಿಸಿಕೊಂಡು ಸಂಚರಿಸಬೇಕಾಗಿದೆ. ಈಗಾಗಲೇ ಇಲ್ಲಿ ನಿತ್ಯ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇನ್ನು ಹೆಚ್ಚುವರಿ ವಾಹನಗಳು ಸಂಚರಿಸಿದರೆ ಸಮಸ್ಯೆ ಮತ್ತಷ್ಟು ದಟ್ಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next