ಸಕಲೇಶಪುರ: ವೃದ್ದರೋರ್ವರು ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಕೃಷ್ಣೇಗೌಡ (67) ಮೃತಪಟ್ಟ ದುರ್ದೈವಿ. ತಾಲೂಕಿನ ಸುಂಡೆಕೆರೆ ಸಮೀಪದ ಕೆಲಗಳಲೆ ಗ್ರಾಮದ ತಮ್ಮ ಕಾಫಿ ತೋಟದಲ್ಲಿ ಶನಿವಾರ ಮುಂಜಾನೆ ನಡೆದುಕೊಂಡು ಹೋಗುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಮೃತ ಶರೀರವನ್ನು ರವಾನೆ ಮಾಡಲಾಗಿದೆ.
ವೃದ್ದನ ಸಾವಿಗೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಸಿದ್ದತೆ ನಡೆಸಲಾಗುತ್ತಿದೆ.