Advertisement

ಹಳೇ ಬ್ಯಾಟು ಹಳೇ ಚೆಂಡು

07:49 PM Dec 13, 2019 | Lakshmi GovindaRaj |

ಕ್ರೀಸ್‌ನಲ್ಲೇ ಬ್ಯಾಟ್ಸ್‌ಮನ್‌ಗಳ ಸೆಕೆಂಡ್ಸ್‌ಗಳ ಪಿಸುಮಾತು!
ಆಟದ ಸಂದರ್ಭದಲ್ಲಿ ಓವರ್‌ ಮುಗಿದಾಗ ಅಥವಾ ಆಟಗಾರನೊಬ್ಬ ಬೌಂಡರಿ, ಸಿಕ್ಸರ್‌ ಹೊಡೆದಾಗ ಅರ್ಧಶತಕ, ಅಥವಾ ಶತಕ ಹೊಡೆದಾಗ ಖುಷಿಯಿಂದ ಕ್ರೀಸ್‌ನ ಮಧ್ಯಭಾಗಕ್ಕೆ ಬರುತ್ತಾರೆ. ಹಾಗೆ ಬಂದವರು, ತಮ್ಮ ತಮ್ಮಲ್ಲೇ ಏನಾದರೂ ಮಾತಾಡಿಕೊಂಡು ನಗುತ್ತಾರೆ. ಕಡೆಗೊಮ್ಮೆ ಬ್ಯಾಟ್‌ಗೆ ಅಥವಾ ಕೈಗವಸಿಗೆ ಪಂಚ್‌ ಕೊಟ್ಟುಕೊಂಡು ತಮ್ಮ ಸ್ಥಾನಕ್ಕೆ ವಾಪಸ್‌ ಹೋಗುತ್ತಾರೆ. ಇವೆಲ್ಲಾ ಒಂದು ನಿಮಿಷ ಅಥವಾ 30-40 ಸೆಕೆಂಡ್‌ಗಳಲ್ಲಿ ಮುಗಿದು ಹೋಗುತ್ತದೆ. ಈ ನಲವತ್ತು ಸೆಕೆಂಡ್‌ಗಳಲ್ಲಿ ಅವರು ಏನು ಮಾತಾಡಬಹುದು? ಯಾವ ಭಾಷೆಯಲ್ಲಿ ಮಾತಾಡಬಹುದು ಎಂಬುದು ನಮ್ಮೆಲ್ಲರ ಸಹಜ ಕುತೂಹಲ. ವೀರೇಂದ್ರ ಸೆಹವಾಗ್‌ ಇಂಥ ಬಿಡುವಿನ ಅವಧಿಯಲ್ಲಿ, ಮುಂದಿನ ಓವರ್‌ನಲ್ಲಿ ತಾನು ಎಷ್ಟು ಫೋರ್‌ ಹೊಡೆಯುವೆ ಎಂದು ಹೇಳಿಬಿಡುತ್ತಿದ್ದರಂತೆ. ಬೌಂಡರಿ ಅಥವಾ ಬೌಲ್ಡ್‌, ಸಿಕ್ಸರ್‌ ಅಥವಾ ಕ್ಯಾಚ್‌ ಇಷ್ಟೇ ನನ್ನ ಆಟ ಎಂದು ಹೇಳಿ ನಗುತ್ತಿದ್ದರಂತೆ.

Advertisement

ಕ್ಯಾಚ್‌ ಕೊಡಬಹುದು ಅಥವಾ ಬೌಲ್ಡ್‌ ಆಗಬಹುದು ಎಂಬ ಮಾತು ಕೇಳಿ ಜೊತೆಗಿದ್ದ ಆಟಗಾರರಿಗೆ ನಗುಬರುತ್ತಿತ್ತಂತೆ. ಭಾರತ ಕ್ರಿಕೆಟ್‌ ಆಟಗಾರರ ಪೈಕಿ ಸ್ವಲ್ಪ ಹೆಚ್ಚು ತರೆಲ ಅನಿಸಿಕೊಂಡಾತ ಕೆ.ಶ್ರೀಕಾಂತ್‌ 80-90ರ ದಶಕದಲ್ಲಿ ಬಿಡುಬಿರುಬೀಸಿನ ಬ್ಯಾಟ್ಸ್‌ಮನ್‌ ಆಗಿದ್ದಾತ. ಓವರ್‌ಗಳ ಮಧ್ಯೆ ಬಿಡುವು ಸಿಕ್ಕಾಗ ಜೊತೆಗಾರರು ಯಾರೇ ಇದ್ದರೂ ನಗುತ್ತಿದ್ದರು. ಇದರ ಹಿಂದಿರುವ ರಹಸ್ಯವೇನು? ನೀವೇನು ಹೇಳ್ತಾ ಇದ್ರಿ ಎಂದು ಸಂದರ್ಶನದಲ್ಲಿ ಕೇಳಿದಾಗ ಶ್ರೀಕಾಂತ್‌ ಹೇಳಿದ್ದು: “ಆಟದ ನೋಡಲು ಬಂದಿದ್ದಾರಲ್ಲ, ಅಲ್ಲಿ ಒಬ್ಬಳು ಸುಂದರವಾದ ಹುಡುಗಿ ಇದ್ದಾಳೆ, ಅವಳಿಗೆ ಖುಷಿ ಕೊಡಲಿಕ್ಕಾದ್ರು ಚೆನ್ನಾಗಿ ಆಡಬೇಕು, ಅಥವಾ ಬೇಗ ಔಟ್‌ ಆದ್ರೆ ಅವಳನ್ನು ನೋಡುಕೊಂಡು ಹೋಗಬೇಕು ಅನ್ನುತ್ತಿದ್ದೆ ಅದನ್ನು ಕೇಳಿದಾಕ್ಷಣ ಜೊತೆಗಿದ್ದವರು ನಗುತ್ತಿದ್ದರು.

ನಿನಗೆ ಧಮ್‌ ಇದ್ರೆ ನನ್ನ ಎಸೆತಕ್ಕೆ ಬೌಂಡರಿ ಹೊಡಿ ನೋಡುವಾ…
ವಿಚಿತ್ರ ಶೈಲಿಯ ಬೌಲಿಂಗ್‌ಗೆ ಹೆಸರಾಗಿದ್ದವರು ಅಬ್ದುಲ್‌ ಖಾದಿರ್‌. ಪಾಕಿಸ್ತಾನದ ಈ ಆಟಗಾರ 80ರ ದಶಕದಲ್ಲಿ ವಿಶ್ವದ ಶ್ರೇಷ್ಠ ಸ್ಪಿನ್ನರ್‌ ಎನ್ನುವ ಖ್ಯಾತಿ ಪಡೆದಿದ್ದರು. ತನ್ನ ಅದ್ಭುತ ಬೌಲಿಂಗ್‌ನಿಂದ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಉದಾಹರಣೆಗಳಿವೆ. ಅಗತ್ಯ ಬಂದಾಗ ನೆಲಕಚ್ಚಿ ನಿಂತು ಬ್ಯಾಟ್‌ ಮಾಡುವುದನ್ನು ಕಲಿತಿದ್ದ. ಇವೆಲ್ಲ ಒಳ್ಳೆಯ ಗುಣಗಳನ್ನು ನಿವಾಳಿಸಿ ಎಸೆಯುವಂತಹ ಅವಗುಣವೆಂದು ಖಾದಿರ್‌ಗಿತ್ತು. ಅದೇ ಎದುರಾಳಿಗಳನ್ನು ಆಡಿಕೊಳ್ಳುವುದು. ಈ ಒಂದೇ ಕೆಟ್ಟ ಗುಣಗಳಿಂದ ಅವರು ಹಲವರ ನಿಷ್ಠುರ ಕಟ್ಟಿಕೊಳ್ಳುವಂತಾಯಿತು. ಕ್ರೀಡಾ ಪತ್ರಕರ್ತರಂತೂ, ಕತ್ತೆಯಂತೆ ಬೌಲ್‌ ಮಾಡುವ ಖಾದಿರ್‌ ಎಂದೇ ಬರೆದು ಬಿಡುತ್ತಿದ್ದರು. ಇಂಥ ಖಾದಿರ್‌ 90ರ ದಶಕದಲ್ಲಿ ನಮ್ಮ ತೆಂಡುಲ್ಕರ್‌ರನ್ನು ಕೆಣಕಿ ತಕ್ಕ ಶಾಸ್ತಿ ಮಾಡಿಸಿಕೊಂಡ, ಏನಾಯಿತೆಂದರೆ ಆಗಷ್ಟೇ ಟೆಸ್ಟ್‌ ಆಡಲು ಆರಂಭಿಸಿದ್ದ ತೆಂಡುಲ್ಕರ್‌.

ಪಾಕಿಸ್ತಾನದ ವೇಗದ ಬೌಲರ್‌ ವಾಸೀಂ ಅಕ್ರಂಗೆ ಒಂದೇ ಓವರ್‌ನಲ್ಲಿ 2 ಬೌಂಡರಿ ಹೊಡೆದಿದ್ದರು. ಇದರಿಂದ ಸಿಟ್ಟಿಗೆದ್ದ ಖಾದಿರ್‌ ಸೀದಾ ತೆಂಡುಲ್ಕರ್‌ ಬಳಿ ಹೋಗಿ “ವಾ ಚಿಲ್ಟಾ …ಫಾಸ್ಟ್‌ ಬೌಲಿಂಗ್‌ನಲ್ಲಿ ಬೌಂಡರಿ ಹೊಡೀತ್ತೀಯಾ? ನಿನಗೆ ಧಮ್‌ ಇದ್ರೆ ನನ್ನ ಎಸೆತಕ್ಕೆ ಬೌಂಡರಿ ಹೊಡಿ, ನಾಲ್ಕೇ ಚೆಂಡು ಎಸೆದು ನಿನ್ನನ್ನು ಔಟ್‌ ಮಾಡ್ತೀನಿ, ಹೋಗಿ ಹಾಲು ಕುಡಿದು ಮಲಗು ಎಂದು ಗೇಲಿ ಮಾಡಿದರು. ಅಷ್ಟೇ ಅಲ್ಲ, ಮುಂದಿನ ಓವರ್‌ ಬೌಲ್‌ ಮಾಡಲು ಬಂದೇ ಬಿಟ್ಟರು. ಅವತ್ತು ತೆಂಡುಲ್ಕರ್‌ ಒಂದೂ ಮಾತನಾಡಲಿಲ್ಲ. ಬದಲಿಗೆ ಬ್ಯಾಟ್‌ ಮಾತಾಡಿತು. ಪೊಗರಿನಿಂದಲೇ ಬೌಲ್‌ ಮಾಡಿದ ಖಾದಿರ್‌ಗೆ ಒಂದೇ ಓವರ್‌ನಲ್ಲಿ ಬೌಂಡರಿ ಹೊಡೆದು “ನನಗೆ ಮಾತಾಡಿ ಗೊತ್ತಿಲ್ಲ, ಆಟ ಆಡುವುದಷ್ಟೇ ಗೊತ್ತು’ ಎನ್ನುತ್ತಾ ತೆಂಡುಲ್ಕರ್‌ ಮುಗುಳ್ನಕ್ಕರು.

Advertisement

Udayavani is now on Telegram. Click here to join our channel and stay updated with the latest news.

Next