Advertisement
ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್‌ನಲ್ಲಿ ಚಾಲನೆ ನೀಡಿದ ಅವರು, ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ ಹಾಗೂ ಊಬರ್ ಕ್ಯಾಬ್‌ಗಳು ಮಂಗಳವಾರದಿಂದ 100 ಓಲಾ, 100 ಉಬರ್ ಕ್ಯಾಬ್‌ಗಳು ಓಡಾಟ ನಡೆಸಲಿವೆ. 108 ಆ್ಯಂಬುಲೆನ್ಸ್‌ಗಳು ಕೋವಿಡ್ 19 ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿವೆ ಹೀಗಾಗಿ ಸಾಮಾನ್ಯ ರೋಗಿಗಳಿಗೆ ತೊಂದರೆ ಯಾಗಬಾರದು ಎನ್ನುವ ಕಾರಣಕ್ಕೆ ಓಲಾ, ಊಬರ್ ಕ್ಯಾಬ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಮುಲು ಹೇಳಿದರು. ಕೋವಿಡ್ 19 ಹೊರತುಪಡಿಸಿ ಸಾಮಾನ್ಯ, ಶೀತ, ಜ್ವರ, ಕೆಮ್ಮು ಹಾಗೂ ಇತರೆ ತೊಂದರೆಗಳಿಂದ ಚಿಕಿತ್ಸೆ ಪಡೆಯಲು ಸರ್ಕಾರಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬರುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡದೇ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
ಸಾಮಾನ್ಯ ರೋಗಿಗಳಿಗಾಗಿ ಓಲಾ, ಊಬರ್ ಸೇವೆ
12:23 PM Apr 08, 2020 | Suhan S |
Advertisement
Udayavani is now on Telegram. Click here to join our channel and stay updated with the latest news.