Advertisement

ಇನ್ನುಮುಂದೆ ಓಲಾದಿಂದ ಈ ಎರಡು ಸೇವೆಗಳು ಸಿಗಲ್ಲ : ಇಲ್ಲಿದೆ ನೋಡಿ ವಿವರ

09:03 PM Jun 25, 2022 | Team Udayavani |

ನವದೆಹಲಿ: ಬೆಂಗಳೂರು ಮೂಲದ ಬೃಹತ್‌ ಕಂಪನಿ ಓಲಾ ತನ್ನೆರಡು ಸೇವೆಗಳನ್ನು ನಿಲ್ಲಿಸಿದೆ.

Advertisement

ಹಳೆಯ ಕಾರುಗಳನ್ನು “ಓಲಾ ಕಾರ್ಸ್‌’ ಮೂಲಕ ಮಾರಲು, ಖರೀದಿಸಲು ಓಲಾ ಅವಕಾಶ ನೀಡಿತ್ತು. ಇದರಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿದೆ.

ಇನ್ನು ಓಲಾ ಡ್ಯಾಶ್‌ ಮೂಲಕ ದಿನಸಿ ಪದಾರ್ಥಗಳನ್ನು ಮನೆಮನೆಗೆ ತಲುಪಿಸುತ್ತಿತ್ತು. ಈ ಸೇವೆಯನ್ನೂ ಸ್ಥಗಿತಗೊಳಿಸಿದೆ.

ಇದನ್ನೂ ಓದಿ:ಅಗ್ನಿಪಥ್‌ ವಿರೋಧಿಸಿ ಪ್ರತಿಭಟನೆಗೆ ಸೂಚನೆ: ಡಿ.ಕೆ.ಶಿವಕುಮಾರ್‌

ಓಲಾ ಕಾರ್ಸ್‌ ಸೇವೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲೇ ಆರಂಭಿಸಲಾಗಿತ್ತು ಎನ್ನುವುದನ್ನು ಗಮನಿಸಬೇಕು.

Advertisement

ಇನ್ನು ಓಲಾ ಡ್ಯಾಶ್‌, ಓಲಾ ಸ್ಟೋರ್ಸ್‌ ಹೆಸರಿನಲ್ಲಿ 2015ರಲ್ಲೇ ಆರಂಭವಾಗಿತ್ತು. ನಂತರ ಮುಚ್ಚಿ ಹೋಗಿತ್ತು.

2021ರ ನವೆಂಬರ್‌ನಲ್ಲಿ ಮತ್ತೆ ಪುನಃ ಆರಂಭಿಸಿ ಈಗ ನಿಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next