Advertisement

ಒಕ್ಕಲಿಗರ ಸಂಘ ಮಹಾರಾಷ್ಟ್ರ ಒಂಭತ್ತನೇ ವಾರ್ಷಿಕ ಮಹಾಸಭೆ

01:34 PM Feb 26, 2019 | |

ಮುಂಬಯಿ: ಸಮಾಜ ಸೇವೆಯಲ್ಲಿ ನಿಷ್ಠಾವಂತರಾಗಿ ಪ್ರಾಮಾಣಿಕವಾಗಿ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸುವುದೇ ಈ ಸಂಘದ ಉದ್ದೇಶ. ಒಕ್ಕಲಿಗರ ರಕ್ಷಣೆ, ಸಮುದಾಯ ಮತ್ತು ಸ್ವಸಂಸ್ಕೃತಿಯ ಹಿತರಕ್ಷಣೆಗೆ ಸಂಘ ಸದಾ ಬದ್ಧವಾಗಿದ್ದು ದಶವರ್ಷದತ್ತ ಮುನ್ನಡೆಯುತ್ತಿದೆ. ಒಕ್ಕಲಿಗರ ಒಗ್ಗಟ್ಟು ಮತ್ತು ಒಳಿತು ಬಯಸುವ ಒಕ್ಕಲಿಗರ ಒಕ್ಕೂಟವೇ ನಮ್ಮ ಉದ್ದೇಶ. ಸಮಾಜೋ
ಭಿವೃದ್ಧಿಯ ಹಿತದೃಷ್ಟಿಯಿಂದ ಸಂಘದಲ್ಲಿ ನಾವೆಲ್ಲರೂ ಸಕ್ರಿಯರಾಗಿದ್ದು ಇಲ್ಲಿನ ಒಕ್ಕಲಿಗರೆಲ್ಲರನ್ನೂ ಒಂದೇ ವೇದಿಕೆಯಡಿ ಒಗ್ಗೂಡಿಸಿ ಸ್ವಸಮುದಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಐಕ್ಯತಾ ಮನೋಭಾವದಿಂದ ಮಾತ್ರ ನಮ್ಮ ಸಾಂಘಿಕತೆ ಸಿದ್ಧಿಗೊಳಿಸಲು ಸಾಧ್ಯ.  ಇದಕ್ಕೆಲ್ಲ ಸಮಾಜ ಬಾಂಧ‌ವರ ಸಹಯೋಗ ಅಗತ್ಯವಾಗಿದೆ  ಎಂದು ಒಕ್ಕಲಿಗರ ಸಂಘ ಮಹಾರಾಷ್ಟ್ರ  ಇದರ ಅಧ್ಯಕ್ಷ ಜಿತೇಂದ್ರ ಜೆ. ಗೌಡ ತಿಳಿಸಿದರು.

Advertisement

ಫೆ. 24ರಂದು ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ರಾಮ ಪಂಜ್ವನಿ ಚಾರಿಟೆಬಲ್‌ ಟ್ರಸ್ಟ್‌ನ ಸೀತಾ ಸಿಂಧು ಭವನದಲ್ಲಿ ಒಕ್ಕಲಿಗರ ಸಂಘದ ಒಂಬತ್ತನೇ ವಾರ್ಷಿಕ ಮಹಾಸಭೆಯನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ಸಮಾಜ ಬಾಂಧವರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.

ಪ್ರಧಾನ ಅಭ್ಯಾಗತರಾಗಿ ಒಕ್ಕಲಿಗರ ಸಂಘದ ನಿಕಟಪೂರ್ವ ಅಧ್ಯಕ್ಷ ರಂಗಪ್ಪ ಸಿ. ಗೌಡ ಹಾಗೂ ಗೌರವ ಪ್ರಧಾನ  ಕಾರ್ಯದರ್ಶಿ  ಶುಭಾ ಆರ್‌. ಮುಲಕಟ್ಟೆ, ಗೌರವ ಪ್ರಧಾನ  ಕೋಶಾಧಿಕಾರಿ ಬಿ. ಎನ್‌. ಶಿವರಾಮ ಗೌಡ,  ಜತೆ ಕಾರ್ಯದರ್ಶಿ ಸಿಂಗಾರೆ ಕರಿಯಪ್ಪ ಗೌಡ, ಜತೆ ಕೋಶಾಧಿಕಾರಿ ಯೋಗೇಶ್ವರ ಸಿ. ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಚೌಡಪ್ಪ ಗೌಡ, ರವಿ ಎನ್‌. ಗೌಡ, ರಮೇಶ್‌ ಎಸ್‌. ಗೌಡ ಅವರು ವೇದಿಕೆಯಲ್ಲಿ ಆಸೀನರಾಗಿದ್ದರು.

ರಂಗಪ್ಪ ಗೌಡ ಅವರು ಮಾತನಾಡಿ,  ನಮ್ಮ ಸಮಾಜದ ಶ್ರೀಮಂತ ಪರಂಪರೆ, ಸುದೀರ್ಘ‌ ಇತಿಹಾಸ ಮುನ್ನಡೆಸಲು ಇಂತಹ ಸಂಸ್ಥೆಗಳೇ ಪೂರಕವಾಗುತ್ತವೆ. ಸಮಾಜದ ಒಗ್ಗಟ್ಟಿಗೆ ಅನ್ಯೋನ್ಯತಾ ಮನೋಭಾವ ಅಗತ್ಯವಿದ್ದು ಅವಾಗಲೇ ಸಂಸ್ಥೆಗಳು  ಉನ್ನತಿಯತ್ತ ಸಾಗುವುದು. ಸಮಾಜದ ಋಣ ತೀರಿಸುವುದು ಪ್ರತಿಯೋರ್ವ ಸ್ವಜಾತೀಯ ಬಂಧುಗಳ ಕರ್ತವ್ಯವಾಗಿದೆ. ಇದಕ್ಕಾಗಿ ವಿಶ್ವಾಸನೀಯ ಸಂಘಟನೆಯ ಅಗತ್ಯವಿದೆ. ಒಕ್ಕಲಿಗರ ಉನ್ನತಿಗಾಗಿ ಅಸ್ತಿತ್ವಕ್ಕೆ ತರಲಾದ ಒಕ್ಕಲಿಗ ಸಂಘ ಮಹಾರಾಷ್ಟ್ರ ಸಂಸ್ಥೆಯು ಸ್ವಂತಿಕೆಯ ಒಕ್ಕಲಿಗ ಭವನ ಕಾಣಬೇಕಾಗಿದೆ ಎಂದರು.

ಮಾಜಿ ಗೌರವ  ಪ್ರಧಾನ  ಕಾರ್ಯದರ್ಶಿ ಕೆ. ರಾಜೇ ಗೌಡ, ಮೋಹನ್‌ಕುಮಾರ್‌ ಜೆ. ಗೌಡ, ಸಿಎ ಮಂಜುನಾಥ ಗೌಡ, ಕುಮಾರ್‌ ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ   ನಟರಾಜ್‌ ಶಿವೇಗೌಡ, ಯೋಗೇಶ್‌ ಎಂ. ಗೌಡ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ-
ಸೂಚನೆಗಳನ್ನಿತ್ತು ಸಂಘದ ಸರ್ವೋನ್ನತಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

Advertisement

ಯುಗಯೋಗಿ ಜಗದ್ಗುರು ದೈವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮಿಸಿ ಆರತಿಗೈದು ಗುರುಪೂಜೆ ನೆರವೇರಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಿದ್ಧ ಸಿಂಹಾಸನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅನುಗ್ರಹ ಯಾಚಿಸಿ ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷರು ಶ್ರೀಫಲ ಒಡೆದು ಮಹಾಸಭೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಪುಲ್ವಾಮ ವಿಧ್ವಂಸಕ ದಾಳಿಯಲ್ಲಿ  ಹುತಾತ್ಮರಾದ  ವೀರ ಯೋಧರಿಗೆ, ಸ್ವರ್ಗೀಯರಾದ ಸಿದ್ಧಗಂಗಾಶ್ರೀ  ಡಾ| ಶಿವಕುಮಾರ ಸ್ವಾಮೀಜಿ, ಕೇಂದ್ರ ಸಚಿವರಾಗಿದ್ದ ಅನಂತ್‌ ಕುಮಾರ್‌, ಕರ್ನಾಟಕದ ಸಚಿವರಾಗಿದ್ದ ನಟ ಅಂಬರೀಶ್‌ ಸೇರಿದಂತೆ ಸಂಘದ ಸದಸ್ಯರು ಹಾಗೂ ಹಿತೈಷಿಗಳಿಗೆ ಸಂತಾಪ ಸೂಚಿಸಲಾಯಿತು.

ಮೀನಾಕ್ಷಿ ಎಸ್‌.ಗೌಡ ಪ್ರಾರ್ಥನೆಗೈದರು. ಶುಭಾ ಆರ್‌. ಮುಲ್ಲಕಟ್ಟೆ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸಭಾ ಕಲಾಪ ನಡೆಸಿದರು. ಬಿ. ಎನ್‌. ಶಿವರಾಮ ಗೌಡ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ವಂದಿಸಿದರು. 

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next