Advertisement

ಆಫ್‌ಲೈನ್‌ ಪರೀಕ್ಷೆ ಬೇಡ : ವಿಟಿಯು ಎದುರು ವಿದ್ಯಾರ್ಥಿಗಳ ಪ್ರತಿಭಟನೆ-ಮನವಿ

02:31 PM Jan 14, 2021 | Team Udayavani |

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಬಿಇ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈಗ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದ್ದನ್ನು ಖಂಡಿಸಿ ಬಿಇ ವಿದ್ಯಾರ್ಥಿಗಳು ಬುಧವಾರ
ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಲಾಕ್‌ಡೌನ್‌ನಲ್ಲಿ ಸರಿಯಾಗಿ ತರಗತಿ ನಡೆಯದೇ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸಿದ್ದಾರೆ. ಕೆಲವೊಂದು ಸಲ ನೆಟವರ್ಕ್‌ ಸಮಸ್ಯೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿಲ್ಲ. ಪ್ರತಿ ನಿತ್ಯ ಒಂದು ಜಿಬಿ ಡಾಟಾ ಇದ್ದಿದ್ದರಿಂದ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಆನ್‌ಲೈನ್‌ ತರಗತಿ ಪೂರ್ತಿಯಾಗಿ ಹಾಜರಾಗಲು ಆಗಿಲ್ಲ. ಆದರೆ ಈಗ ಏಕಾಏಕಿ ಆಪ್‌ಲೈನ್‌
ಪರೀಕ್ಷೆ ಬರೆಯುವಂತೆ ಹೇಳಿದರೆ ಹೇಗೆ ಎಂದು ಆರೋಪಿಸಿದರು.

ಇದನ್ನೂ ಓದಿ:ಭ್ರಷ್ಟ ಯೋಗೀಶ್ವರ ಸಚಿವನಾಗಿದ್ದೇ ನನಗೆ ಅಪಥ್ಯ: ಎಚ್.ವಿಶ್ವನಾಥ್ ಅಸಮಾಧಾನ

ಈ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಕೇಳಲು ವಿವಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸಿಲ್ಲ. ಜುಲೆ„ದಿಂದಲೇ ಕಾಲೇಜುಗಳು
ಆರಂಭವಾಗಿದ್ದವು, ನೀವೇಕೆ ಬಂದಿಲ್ಲ ಎಂದು ಸುಳ್ಳು ಮಾಹಿತಿ ನೀಡಿದೆ. ಕಾಲೇಜುಗಳೇ ಆರಂಭವಾಗದ ಲಾಕ್‌ ಡೌನ್‌ ದಿನಗಳಲ್ಲಿ ವಿಟಿಯು ತರಗತಿ ನಡೆಸಿದ್ದಾದರೂ ಎಲ್ಲಿ, ಇಂಥ ಸುಳ್ಳು ಮಾಹಿತಿ ನೀಡಿರುವ ವಿಟಿಯು, ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಯಾವುದೇ ಕಾರಣಕ್ಕೂ ವಿಟಿಯು ಆಫ್‌ಲೆ„ನ್‌ ಪರೀಕ್ಷೆ ನಡೆಸಬಾರದು. ಆಫ್‌ಲೈನ್‌ ಪರೀಕ್ಷೆ ನಡೆಸಿದರೆ ಮೂರು ದಿನಗಳ ಒಳಗೆ ಕೋವಿಡ್‌ ತಪಾಸಣಾ ವರದಿ ಬರುವುದು ಕಷ್ಟ. ಹೀಗಾಗಿ ಆನ್‌ಲೆ„ನ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೂ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡರಾದ ಅನುದೀಪ ಕುಲಕರ್ಣಿ, ಕಾರ್ತಿಕ ಶಿಗಳಿ, ಸುಷ್ಮಾ, ಆದಿತ್ಯ ಬಸ್ತವಾಡಕರ, ವಿನಾಯಕ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next