Advertisement

Iceland: ಐಸ್‌ಲ್ಯಾಂಡ್‌ನ‌ಲ್ಲಿ 800 ಬಾರಿ ಕಂಪಿಸಿದ ಭೂಮಿ- ಸ್ಥಳಕ್ಕೆ ಅಧಿಕಾರಿಗಳ ದೌಡು

11:16 PM Nov 11, 2023 | Team Udayavani |

ರಖೀವಿಕ್‌: ಐರೋಪ್ಯ ರಾಷ್ಟ್ರ ಐಸ್‌ಲ್ಯಾಂಡ್‌ನ‌ ನೈಋತ್ಯ ರೇಖೀನಿಸ್‌ ಪರ್ಯಾಯ ದ್ವೀಪದಲ್ಲಿ ಶುಕ್ರವಾರ 14 ಗಂಟೆಗಳಲ್ಲಿ 800 ಬಾರಿ ಭೂಕಂಪನವಾಗಿದೆ. ಜ್ವಾಲಾಮುಖೀ ಸ್ಫೋಟಿಸುವ ಆತಂಕದ ಹಿನ್ನೆಲೆಯಲ್ಲಿ ಐಸ್‌ಲ್ಯಾಂಡ್‌ ಸರಕಾರವು ತುರ್ತು ಪರಿಸ್ಥಿತಿ ಘೋಷಿಸಿದೆ.

Advertisement

“ಐಸ್‌ಲ್ಯಾಂಡ್‌ ರಾಜಧಾನಿ ರೇಖೀವಿಕ್‌ನಿಂದ 40 ಕಿ.ಮೀ. ದೂರದಲ್ಲಿ ರೇಖೀನಿಸ್‌ ಪರ್ಯಾಯ ದ್ವೀಪದ ಗ್ರಿಂಡಾವಿಕ್‌ ಗ್ರಾಮದ ಸಮೀಪದ ಸುಂಧುಕಗಿಗರ್‌ನಲ್ಲಿ ಭೂಕಂಪದ ಕೇಂದ್ರ ಬಿಂದು ಇದೆ. ಇಲ್ಲಿ ಎರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಜ್ವಾಲಾಮುಖೀ ಕೂಡ ಸ್ಫೋಟಿಸುವ ಸಾಧ್ಯತೆ ಇದೆ’ ಎಂದು ಐಸ್‌ಲ್ಯಾಂಡ್‌ ಹವಾಮಾನ ಇಲಾಖೆ ತಿಳಿಸಿದೆ.

“ಗ್ರಿಂಡಾವಿಕ್‌ ಗ್ರಾಮದ ಸಮೀಪ ಸಂಭವಿಸಿದ ಭೂಕಂಪವು ರಿಕ್ಟರ್‌ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಆ ಗ್ರಾಮದಲ್ಲಿ ಸುಮಾರು 4,000 ಮಂದಿ ನೆಲೆಸಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಿಪತ್ತು ನಿರ್ವಹಣ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯ ಕೈಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್‌ನಿಂದ ಇಲ್ಲಿಯವರೆಗೆ ರೇಖೀನಿಸ್‌ ಪರ್ಯಾಯ ದ್ವೀಪದಲ್ಲಿ 24,000 ಬಾರಿ ಭೂಕಂಪನ ಸಂಭವಿಸಿದೆ. 2021ರಿಂದ ಮೂರು ಬಾರಿ ರೇಖೀನಿಸ್‌ನಲ್ಲಿ ಲಾವಾರಸ ಸ್ಫೋಟಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next