Advertisement

ರೇಷ್ಮೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು

04:38 PM Sep 28, 2022 | Team Udayavani |

ಶಿಡ್ಲಘಟ್ಟ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ರೋಗಬಾಧೆ ಬಾಧಿಸುತ್ತಿದ್ದರೂ ಇಲಾಖಾ ಅಧಿಕಾರಿಗಳು ರೋಗವನ್ನು ನಿರ್ಮೂಲನೆ ಮಾಡಲು ವಿಫಲರಾಗಿದ್ದು ರೇಷ್ಮೆ ಬೆಳೆಗಾರರು ತೊಂದರೆಯಲ್ಲಿ ಸಿಲುಕಿದ್ದಾರೆ ಎಂದು ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕ್ಯಾತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ವೈಹುಣಸೇನಹಳ್ಳಿಯ ಸಿಆರ್‌ಸಿ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ಎನ್‌ಆರ್‌ಡಿಎಸ್‌ ಸಹಯೋಗದಲ್ಲಿ ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ 2021-22 ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಡ್ಲಘಟ್ಟ ತಾಲೂಕು ಸಹಿತ ಜಿಲ್ಲೆಯಲ್ಲಿ ರೈತರು ಫಲವತ್ತಾದ ಭೂಮಿಯನ್ನು ಯಥೇಚ್ಚವಾಗಿ ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಳೆದುಕೊಂಡಿದ್ದೇವೆ. ಇದರಿಂದ ಯಾವುದೇ ಬೆಳೆ ಇಟ್ಟರೂ ನಷ್ಟವನ್ನು ಅನುಭವಿಸುವಂತಾಗಿದೆ.

ರೈತರು ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ಮೂಲಕ ಅತೀ ಕಡಿಮೆ ದರದಲ್ಲಿ ಕೃಷಿಗೆ ಪೂರಕವಾಗಿರುವ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಜತೆಗೆ ಕಂಪನಿಯಲ್ಲಿ ಸದಸ್ಯರಾಗಿರುವ ರೈತರಿಗೆ ತಿಂಗಳಿಗೆ 20 ಸಾವಿರ ವಸ್ತುಗಳನ್ನು ಖರೀದಿಸಲು (ರೈತ ಉತ್ಪಾದಕರ ಕಂಪನಿಯಲ್ಲಿ ಮಾತ್ರ) ಕ್ರೆಡಿಟ್‌ ಕಾರ್ಡ್‌ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡು ರೇಷ್ಮೆ ಕೃಷಿ ಅಥವಾ ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಸಾಮಾಗ್ರಿಗಳನ್ನು ಕಾರ್ಡ್‌ ಬಳಸಿ ಖರೀದಿಸಬಹುದು ಒಂದು ತಿಂಗಳ ಅವಧಿಯಲ್ಲಿ 20 ಸಾವಿರ ರೂಗಳನ್ನು ಮರುಪಾವತಿಸಿದರೆ ಮುಂದಿನ ದಿನಗಳಲ್ಲಿ 50 ಸಾವಿರವರೆಗೂ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಾಗುತ್ತದೆ ಸಂಘದ ಸದಸ್ಯರು 2 ಸಾವಿರ ರೂಗಳನ್ನು ಪಾವತಿಸಿ ಕಾರ್ಡ್‌ ಪಡೆದುಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆಎಚ್‌ ವೀಣಾ ಮಾತನಾಡಿ, ಕೇಂದ್ರ,ರಾಜ್ಯ ಸರ್ಕಾರಗಳು ಕೃಷಿಗಾಗಿ ಪ್ರೋತ್ಸಾಹ ಧನ ನೀಡುತ್ತಿದೆ. ರೈತರು ಇದರ ಉಪಯೋಗ ಪಡೆಯಬೇಕು ಎಂದರು.

Advertisement

ವೈಹುಣಸೇನಹಳ್ಳಿ ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ಸಿಇಒ ಎನ್‌ ಚಂದನಾ ಮಾತನಾಡಿ ಕಂಪನಿಯಲ್ಲಿ ಒಟ್ಟು 688 ಷೇರುದಾರರಿದ್ದಾರೆ, ಕಳೆದ ಸಾಲಿನ ನವೆಂಬರ್‌ನಿಂದ ವಹಿವಾಟು ನಡೆಯುತ್ತಿದೆ ಕಂಪನಿಯಲ್ಲಿ ರೇಷ್ಮೆ ಉಪಕರಣಗಳು ಚಕ್ಕೆ ಬೂಸಾ ಇಂಡಿ ಕೀಟನಾಶಕಗಳು ಕಳೆನಾಶಕಗಳು ಹಾಗೂ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎನ್‌ಆರ್‌ಡಿಎಸ್‌ ಸಂಸ್ಥೆ ಕಾರ್ಯನಿರ್ವಹಕ ನಿರ್ದೇಶಕ ಎಂ. ವೆಂಕಟರಮಣಸ್ವಾಮಿ, ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಡಿ.ಎನ್‌. ಆಂಜನೇಯರೆಡ್ಡಿ, ಪಿ ಮುನಿರಾಜು, ಎನ್‌ ಮಂಜುನಾಥ್‌, ನಾರಾಯಣಪ್ಪ, ಕೆಎನ್‌ ಮಂಜುನಾಥ್‌, ವಿ ರಮೇಶ್‌, ಅಂಬಿಕಾ, ವಿಎಸ್‌ ಕೃಷ್ಣಾರೆಡ್ಡಿ, ಸುಶೀಲಾ, ಬಿಎಲ್‌ ಜಯರಾಮ್‌, ಅನಿತಾ, ಎನ್‌.ವೆಂಕಟೇಶ್‌, ನರಸಿಂಹಗೌಡ, ಜಿಲ್ಲಾ ಎಫ್‌ಪಿಒ ಸಂಯೋಜಕ ಎನ್‌ ಮನೋಹರ್‌, ಡಿಇಒ ಮಧು, ಜಿಲ್ಲಾ ಎಫ್‌ಪಿಒ ಸಹಸಂಯೋಜಕ ಎಚ್‌ವಿ ಶ್ರೀರಾಮರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next