Advertisement

ಅಧಿಕಾರಿಗಳ ಭರವಸೆ: ಧರಣಿ ಕೈಬಿಟ್ಟ ನಗರಸಭಾ ಸದಸ್ಯರು

05:58 PM Oct 02, 2020 | Suhan S |

ರಾಣಿಬೆನ್ನೂರ: ಕಳಪೆಯಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳುಭರವಸೆ ನೀಡಿದ ಹಿನ್ನೆಲೆಯಲ್ಲಿ, ನಗರಸಭೆ ಕಚೇರಿ ಮುಂದೆ ನಗರಸಭಾ ಸದಸ್ಯರು ನಡೆಸುತ್ತಿದ್ದ ನಿರಂತರ ಧರಣಿಯನ್ನು ಕೈಬಿಟ್ಟಿದ್ದಾರೆ.

Advertisement

ಧರಣಿ ಸ್ಥಳಕ್ಕೆ ಆಗಮಿಸಿದ ನಗರಸಭಾ ಪೌರಾಯುಕ್ತ ಡಾ| ಮಾಲತೇಶ ಎನ್‌. ಹಾಗೂ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ ಅಧಿ ಕಾರಿ ಉಮೇಶ ಮುತ್ತಪ್ಪ ಅವರು, ಸದಸ್ಯರ ಮನವೊಲಿಸಿ ಕಳೆಪೆಗಿರುವ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ದುರಸ್ತಿಪಡಿಸಲಾಗುವುದು. ಅಲ್ಲಿಯ ವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಈ ವೇಳೆ ನಗರಸಭಾ ಸದಸ್ಯ ಲಿಂಗರಾಜ ಕೋಡಿಹಳ್ಳಿ ಮಾತನಾಡಿ, ಎಲ್ಲ ಕಳಪೆ ಕಾಮಗಾರಿಗಳನ್ನು ಪುನಃ ಗುಣಮಟ್ಟದಲ್ಲಿ ಮಾಡಬೇಕು. ಯಾರಾದರೂ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರು ಹೋಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಉದ್ಘಾಟಿಸಲು ಮುಂದಾದಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ನಾಗರಾಜ ಪವಾರ, ಜಯಶ್ರೀ ಪಿಸೆ, ಸುಮಾ ಹುಚ್ಚಗೊಂಡರ, ನೂರುಲ್ಲಾ ಖಾಜಿ, ಚಂಪಾ ಬಿಸಲಳ್ಳಿ, ಅಬ್ದುಲ್‌ ಗಫ್‌ರ್‌ ಖಾನ ಪಠಾಣ, ಮಹಬೂಬ್‌ ಮುಲ್ಲಾ, ಹುಚ್ಚಪ್ಪಮೆಡ್ಲೆರಿ, ಶಶಿಧರ ಬಸೇನಾಯ್ಕ, ಮುಖಂಡರಾದರಮೇಶ ಬಿಸಲಳ್ಳಿ, ಬಸಣ್ಣ ಹುಚ್ಚಗೊಂಡರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next