Advertisement
ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ರಾಯನಕಲ್ಲು, ಮಿನಕನಗುರ್ಕಿ, ಶಾಂಪುರ, ವರವಾಣಿ, ಪುರಗ್ರಾಮ, ಬಿಸಿಲಹಳ್ಳಿ, ಹಳೇಹಳ್ಳಿ, ಗುಯ್ನಾಲ, ಉಪ್ಪಾರಹಳ್ಳಿ, ಜರಬಂಡಹಳ್ಳಿ ವೃತ್ತಗಳು ಮತ್ತು ಏಳು ಗ್ರಾಪಂ ಗಳು ಸೇರಿ ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿದೆ.
ಪುರ ಗ್ರಾಮ ಲೆಕ್ಕಾ ಧಿಕಾರಿ ವೃತ್ತದಲ್ಲಿ ಪುರ, ಭಕ್ತರಹಳ್ಳಿ (ಮಜರೆ), ಅರಕುಂದ, ಅರಸಲಬಂಡೆ, ಪಿ.ನಾಗೇನಹಳ್ಳಿ, ಕೊಡಿಗಾನಹಳ್ಳಿ, ಬಿಸಿಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಬಿಸಿಲಹಳ್ಳಿ, ಬೀರಮಂಗಲ, ಕೊಂಡೇನಹಳ್ಳಿ. ರಾಯಮಾಕಲಹಳ್ಳಿ, ದ್ವಾರಗಾನಹಳ್ಳಿ, ಗುವ್ವಲಹಳ್ಳಿ, ಚೆನ್ನ ಬೈರನಹಳ್ಳಿ (ಬೇಚರಾಕ್), ಹಳೇ ಹಳ್ಳಿ ಗ್ರಾಮಲೆಕ್ಕಾಧಿಕಾರಿ ವ್ಯಾಪ್ತಿಯಲ್ಲಿ ಹಳೇಹಳ್ಳಿ, ಕಡಾ ಚಿಕ್ಕನಹಳ್ಳಿ (ಮಜರೆ), ದೇವರಕೊಂಡಹಳ್ಳಿ (ಮಜರೆ), ಕುಲುಮೇನ ಹಳ್ಳಿ (ಮಜರೆ), ನಾಗರಬಾವಿ, ಗುಯ್ಯಲ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಗುಯ್ಯಲಹಳ್ಳಿ, ಬಿಕ್ಕಲಹಳ್ಳಿ (ಮಜರೆ), ಕಾಮರೆಡ್ಡಿಹಳ್ಳಿ(ಮಜರೆ), ಅಲಸ್ ತಿಮ್ಮನ ಹಳ್ಳಿ, ಬುಡುಗ ತ್ತಿಮ್ಮನಹಳ್ಳಿ, ವಸಂತನ ಹಳ್ಳಿ (ಬೇಚರಾಕ್), ಉಪ್ಪಾರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದ ವ್ಯಾಪ್ತಿಯಲ್ಲಿ ಉಪ್ಪಾರಹಳ್ಳಿ, ಬಂದಾರ‌್ಲಹಳ್ಳಿ (ಮಜರೆ), ಚೀಲನಹಳ್ಳಿ, ಚಿನ್ನನಾಗೇನಹಳ್ಳಿ, ನೇರಳಹಳ್ಳಿ (ಬೇಚರಾಕ್), ಜರಬಂಡ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಜರಬಂಡಹಳ್ಳಿ, ಬಾಲರೆಡ್ಡಿಹಳ್ಳಿ, ಕಂಬಾಲಹಳ್ಳಿ (ಮಜರೆ), ತೇಕಲಹಳ್ಳಿ, ಪಿಡಿಚಲಹಳ್ಳಿ, ಗೊಲ್ಲಹಳ್ಳಿ, ಗೊಂಡಿಹಳ್ಳಿ (ಬೇಚರಾಕ್), ನುಲುಗುಮ್ಮನ ಹಳ್ಳಿ, ಹನು ಮಂತಪುರ, ಭೂಮನಹಳ್ಳಿ, ದಿನ್ನೇನಹಳ್ಳಿ ಒಳಗೊಂಡಂತೆ ಗ್ರಾಮಗಳನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಗೆ ಸೇರಿಸಲಾಗಿದೆ.
Related Articles
Advertisement
ತಾಲೂಕು ಕೇಂದ್ರ ಘೋಷಣೆ: ಅಭಿನಂದನೆಸರ್ಕಾರವು ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿ ಅಂತಿಮ ಸುತ್ತೋಲೆ ಹೊರಡಿಸಿದ್ದು, ಇದಕ್ಕಾಗಿ ಮಂಚೇನಹಳ್ಳಿಯ ಸಂಘಪರಿವಾರದ ಸಂಘಟನೆಗಳಾದ ವಿಶ್ವಹಿಂದು ಪರಿಷದ್, ಅಖೀಲ ಭಾರತ ವಿದ್ಯಾರ್ಥಿ ಪರಿಷದ್, ಹಿಂದೂ ಜಾಗರಣ ವೇದಿಕೆ ಹಾಗೂ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ನಾಗರಿಕ ವೇದಿಕೆಯಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು, ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ವೇದಿಕೆ ಅಧ್ಯಕ್ಷ ಆನಂದ ತೀರ್ಥ ತಿಳಿಸಿದ್ದಾರೆ. ತಾಲೂಕಿಗೆ ಸಂಬಂಧಿಸಿದ ಮುಂದಿನ ಅಭಿವೃದ್ಧಿ ಕೆಲಸಗಳನ್ನು ಚುನಾವಣೆಯೊಳಗೆ
ಕೈಗೊಳ್ಳಲು ಮನವಿ ಮಾಡಿದ್ದಾರೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿರುವುದಕ್ಕೆ ಸಂತಸವಾಗಿದೆ. ಈ ನಿರ್ಧಾರ ಕೈಗೊಂಡಿರುವ ಸರ್ಕಾರವನ್ನು ಸ್ವಾಗತಿಸುತ್ತೇನೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳು ಅಧಿಕಾರಿಗಳ ನೇಮಕ, ಕಚೇರಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಆಡಳಿತ ವಿಕೇಂದ್ರೀಕರಣ ಸಾರ್ಥವಾಗುತ್ತದೆ.
● ಎನ್.ಎಚ್.ಶಿವಶಂಕರರೆಡ್ಡಿ, ಶಾಸಕರು, ಗೌರಿಬಿದನೂರು ಕ್ಷೇತ್ರ