Advertisement

ತೆಂಗು ರೋಗ ವೀಕ್ಷಿಸಿದ ಅಧಿಕಾರಿಗಳು

01:00 AM Mar 20, 2019 | Harsha Rao |

ಕುಂದಾಪುರ: ಹೆಮ್ಮಾಡಿಯ ಸಂತೋಷ ನಗರದಲ್ಲಿ ಕಂಡುಬಂದ ತೆಂಗಿನ ವಿಚಿತ್ರ ರೋಗ ವೀಕ್ಷಿಸಲು ಮಂಗಳವಾರ ತೋಟಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

ಇಲ್ಲಿನ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಅವರು ಹೆಮ್ಮಾಡಿ ಸಂತೋಷ ನಗರದ ರಹೀಂ ಅವರಲ್ಲಿಗೆ ಭೇಟಿ ನೀಡಿದ್ದು  ಸತ್ತುಬಿದ್ದ ಮರಗಳನ್ನು, ರೋಗಪೀಡಿತ ಮರಗಳನ್ನು ನೋಡಿದ್ದಾರೆ. 
ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿಯೂ ಕಂಡುಬರುವಂತಹ ಮಾದರಿಯಲ್ಲಿ ಈ ರೋಗ ಲÒಣ ಇಲ್ಲದ ಕಾರಣ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ಮಾಹಿತಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಕರೆಸಿ ಅವರಿಂದ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ. 

ಹೆಮ್ಮಾಡಿ ಪರಿಸರದಲ್ಲಿ ತೆಂಗಿನ ಮರಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಪರಿಣಾಮ ಎರಡು ತಿಂಗಳಲ್ಲಿ ಸಾಲು ಸಾಲು ಮರಗಳು ನೆಲಕ್ಕುರುಳಿವೆ. ಇದಕ್ಕೆ ಔಷಧಿ ಏನೆಂದು ತಿಳಿಯದೇ ತೆಂಗು ಬೆಳೆದವರು ಕಂಗಾಲಾಗಿದ್ದಾರೆ. 
ಹೆಮ್ಮಾಡಿಯ  ಸಂತೋಷ ನಗರದ ಬಳಿ ರಹೀಂ ಎಂಬವರ ಐದರಷ್ಟು ಮರಗಳು ಈಗಾಗಲೇ ಈ ರೋಗಕ್ಕೆ ಬಲಿಯಾಗಿದೆ ಎಂದು ಉದಯವಾಣಿ “ಹೆಮ್ಮಾಡಿ: ತೆಂಗಿನ ಮರಗಳಿಗೆ ¬ಬಂತು ವಿಚಿತ್ರ ರೋಗ!’ ಎಂದು ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next