Advertisement
ಸೋಂಕು ದೃಢಪಟ್ಟ ದ್ವಿತೀಯ ಸಂಪರ್ಕದಲ್ಲಿದ್ದ 53 ಜನರನ್ನು ಏ. 19ರಂದು ಕ್ವಾರಂಟೈನ್ ಮಾಡಲು ಹೋದಾಗ, ಉಂಟಾದ ಸಂಘರ್ಷದ ನಂತರವೇ ಜನ ಇಲ್ಲಿಂದ ಕಾಲುಕಿತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದಾಂಧಲೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ 126 ಜನರನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಲ್ಲೇ ಐವರಿಗೆ ಇಲ್ಲಿಯವರೆಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಭೀತಿಗೆ ಕಾರಣವಾಗಿದೆ.
Related Articles
Advertisement
ಜಮೀರ್ ಅಹಮದ್ ವಿರುದ್ಧ ಪ್ರಕರಣಕ್ಕೆ ಕಟೀಲ್ ಮನವಿಪಾದರಾಯನಪುರದಲ್ಲಿ ನಡೆದ ಸಮಾಜ ವಿರೋಧ ಗಲಾಟೆಯ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಅಶಾಂತಿಗೆ ಕಾರಣರಾದ ಶಾಸಕ ಜಮೀರ್ ಅಹಮದ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿಯಾದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದಲ್ಲಿ ಕೋವಿಡ್ ಸೋಕು ತಡೆಗೆ ನಡೆದಿರುವ ಚಟುವಟಿಕೆಗಳ ವಿವರ ನೀಡುವ ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ಕಾರ್ಯ ಯೋಜನೆಗಳ ಬಗ್ಗೆ ಪಕ್ಷದ ವತಿಯಿಂದ ಸಲಹೆಸಹಿತ ಮನವಿ ಸಲ್ಲಿಸಿದರು. ಪ್ರಮುಖವಾಗಿ ದೆಹಲಿಯಲ್ಲಿ ನಡೆದ ತಬ್ಲಿಘೀ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಇನ್ನೂ ಅನೇಕರನ್ನು ತ್ವರಿತವಾಗಿ ಪತ್ತೆ ಹಚ್ಚಬೇಕು. ಹಾಗೆಯೇ ಪಾದರಾಯನಪುರದಲ್ಲಿ ಗಲಭೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಶಾಸಕ ಜಮೀರ್ ಅಹಮ್ಮದ್ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ವಾರ್ಡ್‌ನ ಒಳಗೆ ಪಾದರಾಯನಪುರದಿಂದ ಯಾರೂ ಬರದಂತೆ ಹಾಗೂ ಇಲ್ಲಿಂದ ಅಲ್ಲಿಗೆ ಯಾರೂ ಹೋಗದಂತೆ ಎಚ್ಚರಿಕೆ ವಹಿಸಿದ್ದೇವೆ. ಬಾಪೂಜಿನಗರದಲ್ಲಿ 12 ಮಸೀದಿಗಳಿದ್ದು, ಈ ಮೂಲಕವೂ ಸಾರ್ವಜನಿಕರಲ್ಲಿ ಹೊರಗೆ ಬರದಂತೆ ಹಾಗೂ ಸೋಂಕು ಲಕ್ಷಣ ಕಾಣಿಸಿಕೊಂಡರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇವೆ.
● ಅಜ್ಮಲ್‌ಬೇಗ್, ಬಾಪೂಜಿ ನಗರ ವಾರ್ಡ್ ಪಾಲಿಕೆ ಸದಸ್ಯ ● ಹಿತೇಶ್. ವೈ