Advertisement

ಅಧಿಕಾರಿಗಳಿಂದ ಕಡತ ನಾಪತ್ತೆ ಹೈಡ್ರಾಮ: ಆರೋಪ

03:20 PM Oct 10, 2020 | Suhan S |

ಮಂಡ್ಯ: ತಾಲೂಕು ಕಚೇರಿಯಲ್ಲಿ ಬೂದನೂರು ನಿವೇಶನ ರಹಿತರಿಗೆಭೂಮಿ ಮಂಜೂರು ಮಾಡುವ ಸಂಬಂಧದ ಕಡತಗಳನ್ನೇ ಅಧಿಕಾರಿ ಗಳು ಬಚ್ಚಿಟ್ಟು ಕಳೆದು ಹೋಗಿದೆ ಎನ್ನುತ್ತಿದ್ದಾರೆ ಎಂದು ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್‌ ಗಂಭೀರ ಆರೋಪ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಗೆ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಗುರುತಿಸಿರುವ ಭೂಮಿ ಸಂಬಂಧ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ ಅವರುತಾಲ್ಲೂಕು ಕಚೇರಿಯಿಂದ ಮಾಹಿತಿ ಪಡೆಯಿರಿ ಎಂದು ಪತ್ರ ಬರೆದು ತಿಳಿಸಿದ ಮೇರೆಗೆ ತಾಲ್ಲೂಕುಕಚೇರಿಗೆ ತೆರಳಿ ವಿಚಾರಿಸಿದಾಗ ಅಧಿಕಾರಿ ಗಳು ಕಡತಗಳು ನಾಪತ್ತೆಯಾಗಿವೆ ಎಂದುಹೇಳುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೊಂದಲ ಸೃಷ್ಟಿ: ಕಳೆದ 4 ವರ್ಷಗಳಿಂದ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 50 ಎಕರೆ ಸರ್ಕಾರಿ ಭೂಮಿ ಇದ್ದು, ನಿವೇಶನ ರಹಿತರಿಗೆ 2 ಎಕರೆ ಮಂಜೂರು ಮಾಡುವ ಸಂಬಂಧಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆ.2ರಂದು ನಿವೇಶನರಹಿತರು ಪ್ರತಿಭಟನಾ ಧರಣಿ ನಡೆಸುವ ಮುನ್ನಾ ಆ.1 ರಂದುಬೂದನೂರು ಗ್ರಾಮಕ್ಕೆ ಬಂದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ಸ್ಥಳೀಯ ರಾಜಕೀಯ ಪ್ರಭಾವಿಗಳು ಹಾಗೂ ಪುಡಾರಿಗಳು ರೈತರ ಕೃಷಿ ಭೂಮಿಯನ್ನು ಆಶ್ರಯ ನಿವೇಶನಕ್ಕೆ ವಶಪಡಿಸಿ ಕೊಳ್ಳಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ಸರ್ವೆ ನಂ. 190/ಪಿ10ನ 6.20ಎಕರೆ ಭೂಮಿಯೇ ಕಾಣುತ್ತಿಲ್ಲ ಎಂದು ಪೂರ್ವ ದಿಕ್ಕಿನಲ್ಲಿರುವ ಭೂಮಿಯ ಪರಿಶೀಲನೆನಡೆಸದೇ ಪಶ್ಚಿಮ ದಿಕ್ಕಿನಲ್ಲಿರುವ ಭೂಮಿಯನ್ನು ಎಸಿ, ತಹಶೀಲ್ದಾರ್‌ ಅವರಿಗೆ ತೋರಿಸಿ ವಂಚಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಕ್ರಮ ಕೈಗೊಳ್ಳಲು ಆಗ್ರಹ: ಬೂದನೂರು ಗ್ರಾಮದ ದಲಿತರ ಇನಾಮು, ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕ ದಾರಿಗಳನ್ನು ಕಬಳಿಸಿರುವ ಭೂಗಳ್ಳರು ಬಡವರ ನಿವೇಶನ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ತಾಲೂಕು ಆಡಳಿತ ಮೇಲೆ ಸಂಪೂರ್ಣ ನಂಬಿಕೆ ಇಲ್ಲದಂತಾಗಿದ್ದು, ಖುದ್ದಾಗಿ ಜಿಲ್ಲಾಧಿಕಾರಿಗಳೇ ಕೂಡಲೇ ಸುಳ್ಳು ಮಾಹಿತಿನೀಡುತ್ತಿರುವರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಿಗರು ಹಾಗೂ ಭೂಮಾಪನ ಇಲಾಖೆಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಬೂದನೂರುಗ್ರಾಪಂ ವ್ಯಾಪ್ತಿಯಲ್ಲಿ ಗುರುತಿಸಿರುವ ಸರ್ಕಾರಿ ಭೂಮಿಯನ್ನು 1-5ಮಾಡಿರುವ ಪ್ರಕಾರ ಅಳತೆ ಹದ್ದುಬಸ್ತ್ ಮಾಡಿ ನಿವೇಶನ ರಹಿತರಿಗೆ ಭೂಮಿ ನೀಡಬೇಕು. ತಕ್ಷಣವೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿವೇಶನರಹಿತರ ಸಭೆ ನಡೆಸಬೇಕು. ಬೂದನೂರು ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಮಾಡಿರುವ ಆದೇಶ ಮತ್ತು ಆಗಿರುವ ಕ್ರಮಗಳ ನಕಲು ಪ್ರತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನ್ಯಾಯ ಸಿಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಅ.12ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ವಕೀಲ ಜೆ.ರಾಮಯ್ಯ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next