Advertisement

ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತೆ

11:40 AM May 15, 2022 | Team Udayavani |

ಕುಷ್ಟಗಿ: ಹೊಸ ಬಾರ್ ಲೈಸೆನ್ಸ್ ಗಾಗಿ ಬಾರ್ ಮಾಲೀಕರಿಂದ ಲಂಚ ಸ್ವೀಕರಿಸುವ ವೇಳೆ ಅಬಕಾರಿ ಉಪ ಆಯುಕ್ತೆಯೊರ್ವರು ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಕುಷ್ಟಗಿಯ ಅಬಕಾರಿ ಉಪ ಆಯುಕ್ತೆ ಸೆಲೆನಾ ಅವರು ಪಟ್ಟಣದ ಸಿಂಧನೂರು ರಸ್ತೆಯ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಲಂಚ ಸ್ವೀಕರಿಸಲು ಆಗಮಿಸಿದ್ದರು. ಈ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಾರ್‌ ಮಾಲೀಕಾರಾದ ಶೈಲಜಾ ಪ್ರಭಾಕಾರಗೌಡ ಅವರು ಹೊಸ ಬಾರ್‌ಗೆ ಲೈಸನ್ಸ್‌ ಮಾಡಿಕೊಡುವಂತೆ ಬೇಡಿಕೆಯಿಟ್ಟಿದ್ದರು. ಲೈಸನ್ಸ್‌ ಮಾಡಿಕೊಡಬೇಕಾದರೆ 3 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ. ಬಾರ್ ಮಾಲೀಕರಾದ ಶೈಲಜಾ ಪ್ರಭಾಕರ ಗೌಡ ಅವರೊಂದಿಗೆ ಒಳ ಒಪ್ಪಂದದನ್ವಯ 3ಲಕ್ಷರೂ.ಗಳಲ್ಲಿ ಒಂದು ಲಕ್ಷ ರೂ. ಸ್ವೀಕರಿಸಲು ಇಲ್ಲಿಗೆ ಬಂದಿದ್ದರು. ಅಜಯ್ ವೈನ್ಸ್ ನಲ್ಲಿ ಕೆಲಸ ಮಾಡುವ ಕೆಲಸಗಾರ ಹೊನ್ನೂರು ಭಾಷ ಅವರ ಬಳಿ1 ಲಕ್ಷ ರೂ. ಲಂಚ ಕಳುಹಿಸಿಕೊಟ್ಟಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಸೆಲೆನಾ ಎಸಿಬಿ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ:ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ನಿಧನ; ಎಚ್ ಡಿಕೆ ಸಂತಾಪ

ಮೇ.14 ರಂದು ಕುಷ್ಟಗಿಯ ಶೈಲಜಾ ಪ್ರಭಾಕರ್ ರವರು ಕೊಪ್ಪಳದ ಎಸಿಬಿ ಠಾಣೆಗೆ ಹಾಜರಾಗಿ ಕೊಪ್ಪಳದ ಸಿ. ಸೆಲಿನಾ ರವರ ವಿರುದ್ಧ ಲಂಚದ ಹಣದ ಬೇಡಿಕೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರು.

Advertisement

ಎಸಿಬಿ ಅಧಿಕಾರಿ & ಸಿಬ್ಬಂದಿಗಳು ದಾಳಿ ಮಾಡಿ ಲಂಚದ ಹಣ ಸಮೇತ ಹೊನ್ನೂರ್ ಬಾಷ, ಅಬಕಾರಿ ಉಪ ಆಯುಕ್ತರಾದ ಸಿ.ಸೆಲಿನಾ ಅವರನ್ನು ವಶಕ್ಕೆ ಪಡೆದಿದಿದ್ದು, ತನಿಖೆ ಮುಂದುವರೆಸಿದ್ದಾರೆ.

ಡಿಎಸ್‌ಪಿ ಶಿವಕುಮಾರ್ ಎಮ್.ಸಿ. ಇನ್ಸ್ ಪೆಕ್ಟರ್ ಗಳಾದ ಆಂಜನೇಯ ಡಿಎಸ್,  ಶಿವರಾಜ ಇಂಗಳೆ, ಸಿಬ್ಬಂದಿಗಳಾದ ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಸವಿತಾ, ಶಂಕರಪ್ಪ, ಚಾಲಕ ಆನಂದರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next