Advertisement

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಸಹಿಸುವುದಿಲ್ಲ: ಹರ್ಯಾಣ ಸಿಎಂ ಖಟ್ಟರ್

02:46 PM Dec 11, 2021 | Team Udayavani |

ಗುರುಗ್ರಾಮ: ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಸಹಿಸುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಸಮಸ್ಯೆಯನ್ನು ಪರಿಹರಿಸಲು ನಾನು ಪೊಲೀಸರಿಗೆ ಹೇಳಿದ್ದೇನೆ, ಜನರು ನಿಗದಿತ ಸ್ಥಳಗಳಲ್ಲಿ ನಮಾಜ್ ಅಥವಾ ಪೂಜೆ ಸಲ್ಲಿಸಲು ಯಾವುದೇ ತೊಂದರೆ ಇಲ್ಲ. ಅದಕ್ಕಾಗಿಯೇ ಧಾರ್ಮಿಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ ತೆರೆದ ಜಾಗದಲ್ಲಿ ನಮಾಜ್ ಮಾಡುವ ಕ್ರಮವನ್ನು ಸಹಿಸುವುದಿಲ್ಲ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗುವುದು” ಎಂದರು.

ತಮ್ಮ ಬಳಿ ಕೆಲವು ಜಮೀನುಗಳಿದ್ದು, ಅಲ್ಲಿ ಅನುಮತಿ ನೀಡಬೇಕು ಎಂದು ಅವರು ಹೇಳಿದ್ದಾರೆ. ವಕ್ಫ್‌ ನ ಯಾವುದಾದರೂ ಜಮೀನು ಅತಿಕ್ರಮಣಕ್ಕೆ ಒಳಗಾಗಿದ್ದರೆ ಅದನ್ನು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಜನರು ತಮ್ಮ ಮನೆಗಳಲ್ಲಿ ನಮಾಜ್ ಮಾಡಬಹುದು. ಆದರೆ ತೆರೆದ ಸ್ಥಳಗಳಲ್ಲಿ ಇದನ್ನು ಮಾಡುವುದರಿಂದ ಘರ್ಷಣೆಗಳು ಉಂಟಾಗಬಹುದು. ಜನರ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಬಲವಂತವಾಗಿ ಏನನ್ನಾದರೂ ಮಾಡುವುದನ್ನು ಸಹಿಸಲಾಗುವುದಿಲ್ಲ” ಎಂದು ಹರ್ಯಾಣ ಸಿಎಂ ಹೇಳಿದರು.

ಇದನ್ನೂ ಓದಿ:ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಜೈಲಿನ ಮಹಡಿಯಿಂದ ಬಿದ್ದು ಸಾವು!

ನವೆಂಬರ್‌ನಲ್ಲಿ ಗುರುಗ್ರಾಮ್ ಆಡಳಿತವು 37 ಗೊತ್ತುಪಡಿಸಿದ ಜಾಗಗಳಲ್ಲಿ ಎಂಟರಲ್ಲಿ ನಮಾಜ್ ಮಾಡಲು ಅನುಮತಿಯನ್ನು ಹಿಂಪಡೆದಿತ್ತು. ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ನಿವಾಸಿ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಆಕ್ಷೇಪಣೆಯ ನಂತರ ಅನುಮತಿಯನ್ನು ರದ್ದುಗೊಳಿಸಲಾಗಿದೆ.

Advertisement

ಗುರುಗ್ರಾಮದಲ್ಲಿ ಶುಕ್ರವಾರ ನಮಾಝ್ ಅನ್ನು ತೆರೆದ ಸ್ಥಳಗಳಲ್ಲಿ ನಡೆಸುವ ಸಂಬಂಧ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ರಾಷ್ಟ್ರೀಯ ವೇದಿಕೆ ಮತ್ತು ಗುರುಗ್ರಾಮ ಇಮಾಮ್ ಸಂಘಟನೆಯ ಧರ್ಮಗುರುಗಳು ಜಿಲ್ಲಾಡಳಿತಕ್ಕೆ ಕೆಲವು ದಿನಗಳ ಹಿಂದೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ ಶುಕ್ರವಾರದ ನಮಾಜ್ 12 ಸ್ಥಳಗಳಲ್ಲಿ ನಡೆಯಲಿದೆ. ಯಾರಾದರೂ ಅಡ್ಡಿಪಡಿಸಿದರೆ ಮುಸ್ಲಿಮ್ ನ್ಯಾಷನಲ್ ಫೋರಂ ಮತ್ತು ಇಮಾಮ್ ಆರ್ಗನೈಸೇಶನ್ ಅದನ್ನು ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಮಸೀದಿ, ಮದರಸಾಗಳು ಮತ್ತು ವಕ್ಫ್ ಬೋರ್ಡ್‌ನ ಭೂಮಿ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ನಾವು ಆಡಳಿತಕ್ಕೆ ಮನವಿ ಮಾಡಿದ್ದೇವೆ, ಇದರಿಂದ ನಮಾಜ್ ಶಾಂತಿಯುತವಾಗಿ ಸಲ್ಲಿಸಬಹುದು ಎಂದು ಮುಸ್ಲಿಂ ರಾಷ್ಟ್ರೀಯ ವೇದಿಕೆಯ ಸಂಚಾಲಕ ಖುರ್ಷಿದ್ ರಜಾಕಾ ಐಎಎನ್‌ಎಸ್‌ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next