Advertisement

Scam; ಎಚ್ಚರ ಇದೊಂದು ವಂಚನೆಯ ಜಾಲ: ಯೂಟ್ಯೂಬ್‌ ವಿಡಿಯೋದಂತೆ ಹಣ ಗಳಿಸಬಹುದು…

06:27 PM Jun 16, 2023 | Team Udayavani |

ಮುಂಬೈ: ನೀವು ಅರೆಕಾಲಿಕ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೆ ಯೂಟ್ಯೂಬ್‌ ನಂತೆ ಹಣಗಳಿಸುವ ಅವಕಾಶ ಇದೆ ಎಂಬುದಾಗಿ ಭರವಸೆ ಹುಟ್ಟಿಸುವ ಅಪರಿಚಿತ ವ್ಯಕ್ತಿಗಳ ವಾಟ್ಸಪ್‌ ನಂಬರ್‌ ನಿಂದ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸಿ…ಒಪ್ಪಿಗೆ ನೀಡಿದರೆ…ನೀವು ಮೋಸ ಹೋಗುವುದರಲ್ಲಿ ಅನುಮಾನವೇ ಇಲ್ಲ!

Advertisement

ಇದನ್ನೂ ಓದಿ:ನೆಹರು ಸ್ಮಾರಕ ಮ್ಯೂಸಿಯಂ ಹೆಸರು ಮರುನಾಮಕರಣ; ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಏನಿದು ಯೂಟ್ಯೂಬ್‌ ನಂತೆ ಹಣಗಳಿಸುವ ವಂಚನೆ ಪ್ರಕರಣ?

ಯೂಟ್ಯೂಬ್‌ ನಂತೆ ಹಣಗಳಿಸಬಹುದು ಎಂದು ನಂಬಿಸಿ ವಂಚಿಸಿರುವ ಸುಮಾರು 170 ಪ್ರಕರಣಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದು ಕೇವಲ ಎರಡು ತಿಂಗಳಲ್ಲಿ ನಡೆದ ಪ್ರಕರಣವಾಗಿದೆ.

“ನಿಮ್ಮ ವಿಡಿಯೋಗಳಿಗೆ ಲೈಕ್ಸ್‌ ನೀಡಲು ನೀವು ಮೊದಲು ಹಣ ಪಾವತಿಸಬೇಕೆಂದು ಹೇಳುವ ಮೂಲಕ ಜನರನ್ನು ವಂಚಿಸುವ ಆನ್‌ ಲೈನ್‌ ಹಗರಣ ಇದಾಗಿದೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Advertisement

25.35 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಮುಂಬೈಯ ಸೈಬರ್‌ ಸೆಲ್‌ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು. ಚೆಂಬೂರ್‌ ನಿವಾಸಿಯೊಬ್ಬರಿಗೆ 27.21 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಜೂನ್‌ ತಿಂಗಳಿನಲ್ಲಿ ಮೂವರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಂಚಕರು ಯೂಟ್ಯೂಬ್‌ ಮೂಲಕ ಹಣಗಳಿಸಬಹುದು ಎಂದು ನಂಬಿಸಿ ವಾಟ್ಸಪ್‌ ನಲ್ಲಿ ಜನರನ್ನು ಸಂಪರ್ಕಿಸುತ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳಿಗೆ ಲೈಕ್ಸ್‌ ಗಳನ್ನು ಹೆಚ್ಚಿಸಲು ಪ್ರಮೋಟ್‌ ಮಾಡಬೇಕೆಂದು ಹೇಳಿ ಡಿಜಿಟಲ್‌ ಮಾರ್ಕೆಟಿಂಗ್‌ ಹೆಸರಿನಲ್ಲಿ ಸಂಪರ್ಕಿಸುತ್ತಾರೆ. ಆಗ ಒಂದೊಂದು ಲೈಕ್ಸ್‌ ಗೆ 50ರಿಂದ 150 ರೂಪಾಯಿ ಲೆಕ್ಕಾಚಾರದಲ್ಲಿ ಹಣವನ್ನು ಪಾವತಿಸಲು ಹೇಳುವ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸುತ್ತಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next