Advertisement

ನೇಕಾರನ ಮಗನಿಗೆ ವಾರ್ಷಿಕ 21.35 ಲಕ್ಷ ಆಫರ್‌

02:30 PM Aug 11, 2022 | Team Udayavani |

ರಬಕವಿ-ಬನಹಟ್ಟಿ: ತುತ್ತು ಊಟಕ್ಕೂ ಉದ್ಯೋಗಕ್ಕೂ ಸಮಾನವಾಗಿ ಬದುಕು ನಡೆಸುವ ಕುಟುಂಬಕ್ಕೆ ಶುಕ್ರದೆಸೆ ಬಂದಿದೆ.

Advertisement

ತಾಲೂಕಿನ ರಬಕವಿಯ ಅಣ್ಣಪ್ಪ ಚಾಪಿ ಎಂಬುವರ ಮಗ ಗುರುವಿಗೆ ಸ್ಯಾಮ್‌ಸಂಗ್‌ ಸೆಮಿ ಕಂಡಕ್ಟರ್‌ ಇಂಡಿಯಾ ರಿಸರ್ಚ್‌(ಎಸ್‌ಎಸ್‌ಐಆರ್‌)ನಿಂದ ವಾರ್ಷಿಕ 21.35 ಲಕ್ಷ ರೂ. ಕ್ಯಾಂಪಸ್‌ ಪ್ಲೇಸ್‌ಮೆಂಟ್‌ ಆಫರ್‌ ಪಡೆದಿರುವುದು ದಾಖಲೆಯಾಗಿದೆ.

ವಿದ್ಯಾರ್ಥಿ ಗುರು ಚಾಪಿ ಬೆಳಗಾವಿ ಕೆಎಲ್‌ಎಸ್‌ ಗೋಗಟೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಳೆದ 43 ವರ್ಷಗಳಲ್ಲಿ ಕಾಲೇಜಿನ ಜಿಐಟಿಯ ವಿದ್ಯಾರ್ಥಿ ಪಡೆದ ಅತ್ಯಧಿಕ ಕ್ಯಾಂಪಸ್‌ ಉದ್ಯೋಗ ಕೊಡುಗೆಯಾಗಿದೆ.

ಜೋಡಣೆ ನೇಕಾರನ ಮಗನಾಗಿರುವ ಗುರುವಿನ ಪುಟ್ಟ ಮನೆಯವರಲ್ಲಿನ ಸಂತಸ ಮುಗಿಲು ಮುಟ್ಟಿದೆ. ಪ್ರತಿಭಾವಂತ ವಿದ್ಯಾರ್ಥಿಯ ಕೀರ್ತಿಗೆ ಇಡೀ ರಬಕವಿ-ಬನಹಟ್ಟಿ ನೇಕಾರ ಸಮುದಾಯ ಹಾಗೂ ಕುರುಹಿನಶೆಟ್ಟಿ ಸಮಾಜ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಸ್ಕಾಲರ್‌ಶಿಪ್‌, ಶಿಕ್ಷಣ ಸಾಲವೇ ಸಹಾಯ: ಕಿತ್ತು ತಿನ್ನುವ ಬಡತನದಲ್ಲಿ ಗುರಿ ಸಾಧಿ ಸಲು, ಹಿಡಿದ ಛಲಕ್ಕೆ ಸರ್ಕಾರದ ಸ್ಕಾಲರ್‌ಶಿಪ್‌ ಹಾಗೂ ಶಿಕ್ಷಣ ಸಾಲವೇ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣವಾಗಿದೆ ಎಂದು ಸಾಧಕ ವಿದ್ಯಾರ್ಥಿ ಗುರು ಚಾಪಿ ತಿಳಿಸಿದ್ದಾರೆ.

Advertisement

ನೇಕಾರ ಮಾಲಿಕ ನೆರವು: ಬಿಇ ಪ್ರವೇಶಾತಿ ಪಡೆಯುವ ವೇಳೆ ಒಟ್ಟು ನಾಲ್ಕೈದು ಲಕ್ಷ ರೂ.ಗಳ ವೆಚ್ಚವಾಗುವುದರಿಂದ ಕೂಲಿ ನೇಕಾರಿಕೆ ಮಾಡುತ್ತಿದ್ದ ವಿದ್ಯಾರ್ಥಿ ತಂದೆ ಅಣ್ಣಪ್ಪ ಚಾಪಿಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದ್ದನ್ನು ವಿದ್ಯಾರ್ಥಿ ಸ್ಮರಿಸಿದ್ದಾನೆ.

ನೇಕಾರ ಸಮುದಾಯದಲ್ಲಿ ಅದರಲ್ಲೂ ಜೋಡಣೆದಾರರ ಕುಟುಂಬದಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆಗೆಂದು ಹಣಕಾಸು ನೆರವು ನೀಡುವಲ್ಲಿ ಸಹಕಾರಿಯಾಗುವುದು ಮಾನವೀಯ ಧರ್ಮ. -ಚಿದಾನಂದ ಬೆಳಗಲಿ, ಜವಳಿ ಉದ್ಯಮಿ

ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ವತಂತ್ರವಾಗಿ ಹಾಗೂ ಏನನ್ನು ಕಲಿಯಲೆತ್ನಿಸುವರೋ ಅದಕ್ಕೆ ಸಹಕಾರಿಯಾದಲ್ಲಿ ಸಾಧನೆ ನಿಶ್ಚಿತ. –ಗುರು ಚಾಪಿ, ಕ್ಯಾಂಪಸ್‌ ಸಾಧಕ ವಿದ್ಯಾರ್ಥಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next