Advertisement

2018ರೊಳಗೆ ಗ್ರಾ.ಪಂ.ಗಳಿಗೆ ಒಎಫ್‌ಸಿ ಸಂಪರ್ಕ: ಚೌಧರಿ

12:00 PM Jun 07, 2017 | Team Udayavani |

ಮಂಗಳೂರು: 2018 ರೊಳಗೆ ದೇಶದ ಎಲ್ಲ 2 ಲಕ್ಷ ಗ್ರಾಮ ಪಂಚಾಯತ್‌ಗಳನ್ನು ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕಕ್ಕೆ ಒಳಪ ಡಿಸಲಾಗುವುದು ಎಂದು ಕೇಂದ್ರ ಸರಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ. ಚೌಧ‌ರಿ ಹೇಳಿದರು.

Advertisement

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ನ್ಯಾಯವಾದಿಗಳ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸುಮಾರು 1 ಲಕ್ಷ ಗ್ರಾ.ಪಂ.ಗಳನ್ನು ಒಎಫ್‌ಸಿ ಸಂಪರ್ಕಕ್ಕೆ ಒಳಪಡಿಸ ಲಾಗಿದೆ. ಇದು ಸಂಪೂರ್ಣಗೊಂಡ ಬಳಿಕ ಸರಕಾರದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸ್ಥಳೀಯ ಮಟ್ಟದಲ್ಲೇ ಪಡೆಯಲು ಸಾಧ್ಯವಾಗುತ್ತದೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಲ್ಲಿ ದೇಶ ಹೊಸ ಪರಿವರ್ತನೆಯೊಂದರ ಹಾದಿಯಲ್ಲಿ ಸಾಗುತ್ತಿದೆ. ಶ್ರಮ ಸಂಸ್ಕೃತಿಯ ಉದ್ದೀಪನೆ ಸರಕಾರದ ಮಹತ್ತರ ಸಾಧನೆ
ಗಳಲ್ಲೊಂದು ಎಂದರು.

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ
ಕೇಂದ್ರ ಸರಕಾರ ನ್ಯಾಯಾಲಯ ಗಳಲ್ಲಿ ನ್ಯಾಯಾಧೀಶರ ನೇಮಕಾತಿಗೆ ಕ್ರಮ ಕೈಗೊಂಡಿದೆ ಎಂದು ಸಚಿವ ಚೌಧರಿ ವಿವರಿಸಿದರು.

Advertisement

ವೈದ್ಯರ ಮೇಲಾಗುತ್ತಿರುವ ಹಲ್ಲೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ವಿರುದ್ಧ ಕ್ರಮಕ್ಕೆ ಈಗಾಗಲೇ ಇರುವ ಕಾನೂನನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ವೈದ್ಯ ಸಮುದಾಯ ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಳೆದ 3 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಗರಿಷ್ಠ ಯೋಜನೆ ಹಾಗೂ ಅನುದಾನ ಬಿಡುಗಡೆಗೊಂ ಡಿದೆ ಎಂದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ನ್ಯಾಯವಾದಿ ಘಟಕದ ಮುಖಂಡರಾದ ಸುವೃತ ಕುಮಾರ್‌, ಸಂತೋಷ್‌ ನಾಯಕ್‌, ದೇವಿಪ್ರಸಾದ್‌ ಸಾಮಾನಿ ಉಪಸ್ಥಿತರಿದ್ದರು.ರಾಮಕೃಷ್ಣ ರೈ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next