Advertisement

ಸ್ವಚ್ಚತೆ ನಮ್ಮ  ಸಂಸ್ಕೃತಿಯ ಅವಿಭಾಜ್ಯ ಅಂಗ: ಸನತ್‌ ಕುಮಾರ್‌

01:03 PM Jul 14, 2018 | |

ಅನಂತಾಡಿ : ಸ್ವಚ್ಚತೆ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಒಡಿಯೂರು ಶ್ರೀಗಳು ಗ್ರಾಮ ಸ್ವಚ್ಚತಾ ಕಾರ್ಯಕ್ರಮವನ್ನು ಹಲವು ವರ್ಷಗಳ ಹಿಂದೆಯೇಆರಂಭಿಸಿ, ಅದನ್ನು ಪ್ರತೀ ವರ್ಷ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ. ನಮಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿರುವುದು ನಮ್ಮ ಭಾಗ್ಯ ಎಂದು ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್‌ ಕುಮಾರ್‌ ರೈ ಹೇಳಿದರು.

Advertisement

ಅವರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅನಂತಾಡಿ ಘಟಸಮಿತಿ ವತಿಯಿಂದ ಆಯೋಜಿಸಲಾದ ಅನಂತಾಡಿ ಗ್ರಾಮ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ಉಗ್ಗಪ್ಪ ಶೆಟ್ಟಿ ಕೊಂಬಿಲ ಮಾತನಾಡಿ, ಸ್ವಚ್ಚತೆಯು ಒಂದು ದಿನಕ್ಕೆ ಸೀಮಿತವಾಗದೇ ದಿನನಿತ್ಯವಾಗಬೇಕು. ನಾವು ನಮ್ಮ ಮನೆಯ ಸುತ್ತಮುತ್ತಲು ಸ್ವಚ್ಚ ಮಾಡಿದರೆ ಗ್ರಾಮ ಸ್ವಚ್ಚವಾಗುತ್ತದೆ. ಯೋಜನೆಯು ಪ್ರತಿಯೊಬ್ಬರಲ್ಲೂ ಸ್ವಚ್ಚತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶ್ರೀಗಳ ಆಶಯವಾಗಿರುವ ಸ್ವಚ್ಚತಾ ಕಾರ್ಯಕ್ರಮವನ್ನು ಗ್ರಾಮ ವಿಕಾಸ ಯೋಜನೆ ಜಿಲ್ಲೆಯಾದ್ಯಂತ ಆಯೋಜಿಸಿ ಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.

ಅಂಗವಿಕಲರ ಶ್ರೇಯೋಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ಗೌಡ ತಾಳಿಪಡ್ಪು, ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್‌ ಗೋಳಿಕಟ್ಟೆ, ಬಂಟ್ರಿಂಜ ಬಿ.ಎಂ.ಎಸ್‌. ಆಟೋ ಚಾಲಕ-ಮಾಲಕ ಸಂಘದ ಮಾಣಿ ವಲಯದ ಪ್ರಧಾನ ಕಾರ್ಯದರ್ಶಿ ಗಣೇಶ್‌ ಪೂಜಾರಿ, ಘಟಸಮಿತಿ ಅಧ್ಯಕ್ಷ ಅರವಿಂದ ಬಿ. ಕೊಂಡೆ ಉಪಸ್ಥಿತರಿದ್ದರು.

ಸೇವಾದೀಕ್ಷಿತೆ ಚಂದ್ರಿಕಾ ಎ. ಸ್ವಾಗತಿಸಿ, ಗುಂಪಿನ ಸದಸ್ಯೆ ಸುನೀತಾ ವಂದಿಸಿದರು. ಸಂಘದ ಸದಸ್ಯೆ ಭಾರತಿ ಆಶಯ ಗೀತೆ ಹಾಡಿದರು. ಗ್ರಾಮ ಸಂಯೋಜಕಿ ಕಾವ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಘಟಸಮಿತಿ ಪದಾಧಿಕಾರಿಗಳು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next