Advertisement

ಟ್ರಕ್ ಚಲಾಯಿಸುವಾಗ ಹೆಲ್ ಮೆಟ್ ಧರಿಸದ ಕಾರಣ 1000 ರೂ. ದಂಡ ವಿಧಿಸಿದ RTO

06:49 PM Mar 18, 2021 | Team Udayavani |

ಒಡಿಶಾ: ಹೆಲ್ ಮೆಟ್ ಧರಿಸಿಲ್ಲ  ಎಂಬ ಕಾರಣಕ್ಕೆ ಟ್ರಕ್ ಚಾಲಕನೋರ್ವನಿಗೆ 1,000 ರೂ. ದಂಡ ವಿಧಿಸಿದ ವಿಚಿತ್ರ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ.

Advertisement

ದಂಡಕ್ಕೆ ಒಳಗಾದ ವ್ಯಕ್ತಿಯನ್ನು ಪ್ರಮೋದ್ ಕುಮಾರ್ ಸ್ವೈನ್ ಎನ್ನಲಾಗಿದ್ದು, ಆತ ತನ್ನ ಟ್ರಕ್ ನ ನೊಂದಣಿ ಸಂಖ್ಯೆಗೆ ಸಂಬಂಧಿಸಿದಂತೆ ಹೆಲ್ ಮೆಟ್ ಧರಿಸಿಲ್ಲದ ಕಾರಣಕ್ಕೆ ಚಲನ್ ಒಂದನ್ನು ಪಡೆದಾಗ ವಿಷಯ ಬೆಳಕಿಗೆ ಬಂದಿದ್ದು, ಈತ 1,000 ರೂ ದಂಡವನ್ನು ಕಟ್ಟಿದ ಬಳಿಕ ಟ್ರಕ್ ಚಾಲಕನೆಗೆ ಪರವಾನಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಅರಾವಕುರಿಚಿ ಕ್ಷೇತ್ರದ BJP ಅಭ್ಯರ್ಥಿಯಾಗಿ ಅಣ್ಣಾಮಲೈ ನಾಮಪತ್ರ ಸಲ್ಲಿಕೆ

ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಟ್ರಕ್ ಚಾಲಕ ಪ್ರಮೋದ್ ಕುಮಾರ್ ಸ್ವೈನ್ ನಾನು ಕಳೆದ ಮೂರು ವರ್ಷಗಳಿಂದ ಟ್ರಕ್ ಚಾಲನೆ ಮಾಡುತ್ತಿದ್ದು, ಈ ಟ್ರಕ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೆ. ನಾನು ನನ್ನ ಟ್ರಕ್ ನ ಪರವಾನಿಗೆಯ ರಿನಿವಲ್ ಪ್ರಕ್ರಿಯೆಗೆಂದು  RTO  ಕಚೇರಿಗೆ ತೆರಳಿದಾಗ ಹೆಲ್ ಮೆಟ್ ಧರಿಸದೆ ಟ್ರಕ್ ಚಾಲನೆ ಮಾಡಿರುವ ಕುರಿತಾಗಿ ದಂಡ ವಿಧಿಸಿರುವುದು ತಿಳಿದುಬಂದಿದೆ ಎಂದಿದ್ದಾರೆ.

ಅಧಿಕಾರಿಗಳು ಅನಾವಶ್ಯಕವಾಗಿ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಕುರಿತಾಗಿ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು  ಟ್ರಕ್ ಚಾಲಕ ಪ್ರಮೋದ್ ಕುಮಾರ್ ಸ್ವೈನ್ ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ:ಬಿಜೆಪಿ ಸೇರಿದ ‘ರಾಮಾಯಣ’ ಧಾರಾವಾಹಿಯ ರಾಮನ ಪಾತ್ರಧಾರಿ ನಟ ಅರುಣ್

Advertisement

Udayavani is now on Telegram. Click here to join our channel and stay updated with the latest news.

Next