Advertisement

‘Spy’ Pigeon; ಕಾಲಿನಲ್ಲಿ ಕ್ಯಾಮರಾ, ಮೈಕ್ರೋಚಿಪ್…ಬೋಟ್ ನಲ್ಲಿ “ಗೂಢಚಾರಿ” ಪಾರಿವಾಳ ಪತ್ತೆ!

04:44 PM Mar 09, 2023 | Team Udayavani |

ಭುವನೇಶ್ವರ: ರಾಜ ಮಹಾರಾಜರ ಕಾಲದಲ್ಲಿ ಕೋಟೆಗಳನ್ನು ಏರಲು ಉಡವನ್ನು ಬಳಕೆ ಮಾಡೋದು, ಬೇಹುಗಾರಿಕೆ ನಡೆಸಲು ಪಾರಿವಾಳಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ಕೇಳಿದ್ದೀರಿ. ಅದೇ ರೀತಿ ಒಡಿಶಾದ ಜಗತ್ ಸಿಂಗ್ ಪುರ್ ಜಿಲ್ಲೆಯಲ್ಲಿ  ಪುಟ್ಟ ಕ್ಯಾಮರಾ ಮತ್ತು ಮೈಕ್ರೋಚಿಪ್ ಅಳವಡಿಸಿದ ಗೂಢಚಾರಿ(Spy Pigeon) ಪಾರಿವಾಳವೊಂದು ಪತ್ತೆಯಾಗಿದೆ.

Advertisement

ಇದನ್ನೂ ಓದಿ:ಹೋಳಿ ಬಣ್ಣ ತೊಳೆಯಲು ಬಾತ್‌ ರೂಮ್‌ ಒಳಗೆ ಹೋದ ದಂಪತಿ ಉಸಿರುಗಟ್ಟಿ ಮೃತ್ಯು: ಕಾರಣವೇನು?

ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ಈ ಪಾರಿವಾಳ ಪತ್ತೆಯಾಗಿದ್ದು, ಅದರ ಕಾಲಿನಲ್ಲಿ ಪುಟ್ಟ ಕ್ಯಾಮರಾ ಮತ್ತು ಮೈಕ್ರೋಚಿಪ್ ಅಳವಡಿಸಿರುವುದನ್ನು ಮೀನುಗಾರರು ಗಮನಿಸಿದ್ದರು.

ಮಾರ್ಚ್ 7ರಂದು ಪರದೀಪ್ ಕರಾವಳಿ ಪೊಲೀಸರಿಗೆ ಪಾರಿವಾಳವನ್ನು ಹಸ್ತಾಂತರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಪಾರಿವಾಳವನ್ನು(Spy Pigeon) ಗೂಢಚರ್ಯೆ ನಡೆಸಲು ಬಳಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಷ್ಟೇ ಅಲ್ಲ ಪಾರಿವಾಳದ ರೆಕ್ಕೆಗಳ ಮೇಲೆ ಅಪರಿಚಿತ ಭಾಷೆಯಲ್ಲಿ ಏನನ್ನೊ ಬರೆಯಲಾಗಿದೆ. ಪಾರಿವಾಳದ ಕಾಲಿಗೆ ಕಟ್ಟಿರುವ ಕ್ಯಾಮರಾ, ಮೈಕ್ರೋಚಿಪ್ ಅನ್ನು ಸೈಬರ್ ತಜ್ಞರಿಗೆ ನೀಡಲಾಗುವುದು ಎಂದು ಪರಾದೀಪ್ ಎಎಸ್ ಪಿ ನಿಮಾಮಿ ಚರಣ್ ಸೇಠಿ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

Advertisement

ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸಿದ್ದು, ಅದರ ಕಾಲಿಗೆ ಕಟ್ಟಿರುವ ಕ್ಯಾಮರಾ ಮತ್ತು ಮೈಕ್ರೋಚಿಪ್ ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಾಗಿದೆ ಎಂದು ಜಗತ್ ಪುರ್ ಸಿಂಗ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಆರ್ ಆರ್ ಪಿಟಿಐಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಪಾರಿವಾಳದ ರೆಕ್ಕೆಗಳಲ್ಲಿ ಯಾವ ಭಾಷೆಯಲ್ಲಿ ಏನು ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ತಜ್ಞರ ನೆರವು ಪಡೆಯಲಾಗಿದ್ದು, ಎಲ್ಲಾ ಮಾಹಿತಿ ಬಂದ ನಂತರ ಗೂಢಚರ್ಯೆ ಪಾರಿವಾಳದ ಬಗ್ಗೆ ಇನ್ನಷ್ಟು ವಿವರ ಲಭ್ಯವಾಗಲಿದೆ ಎಂದು ವರದಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next