ಬಾಲಸೋರ್: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಧ್ಯವಯಸ್ಕ ವಿವಾಹಿತ ಮಹಿಳೆಯ ಮೇಲೆ ಆಕೆಯ ಎರಡೂವರೆ ವರ್ಷದ ಮಗನ ಮುಂದೆ 79 ದಿನಗಳ ಕಾಲ ಮಂತ್ರವಾದಿಯೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಪೊಲೀಸರು ಮಹಿಳೆ ಮತ್ತು ಆಕೆಯ ಮಗುವನ್ನು ಬೀಗ ಹಾಕಿದ ಕೊಠಡಿಯಿಂದ ರಕ್ಷಿಸಿದ್ದಾರೆ ಆದರೆ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಆತನನ್ನು ಹಿಡಿಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಮಹಿಳೆ ಮತ್ತು ಆಕೆಯ ಅತ್ತೆ-ಮಾವಂದಿರ ನಡುವಿನ ವೈವಾಹಿಕ ಭಿನ್ನಾಭಿಪ್ರಾಯವನ್ನು ಪರಿಹರಿಸಲು ತನ್ನ ಪತಿ ಮತ್ತು ಅತ್ತೆಯಂದಿರು ಮಂತ್ರವಾದಿಯೊಂದಿಗೆ ಇರುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
2017 ರಲ್ಲಿ ವಿವಾಹವಾದ ಮಹಿಳೆ, ವರದಕ್ಷಿಣೆಗಾಗಿ ತನ್ನ ಅತ್ತೆಯಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾಳೆ.
Related Articles
ಮಹಿಳೆ ತನ್ನೊಂದಿಗೆ ಕೆಲವು ತಿಂಗಳು ಇದ್ದರೆ ಭಿನ್ನಾಭಿಪ್ರಾಯವನ್ನು ಪರಿಹರಿಸುವುದಾಗಿ ತಾಂತ್ರಿಕ್ ಕುಟುಂಬಕ್ಕೆ ಭರವಸೆ ನೀಡಿದ್ದ.ಆಕೆಯನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ , ಅವಳ ಅತ್ತೆ ಅವಳನ್ನು ಪ್ರಜ್ಞೆ ತಪ್ಪಿಸಿದ್ದು, ಎಚ್ಚರಗೊಂಡಾಗ ಆಕೆ ಮತ್ತು ಮಗು ತಂತ್ರಿಕನ ಕೋಣೆಯಲ್ಲಿ ಇದ್ದರು ಎನ್ನಲಾಗಿದೆ.
ತಾಂತ್ರಿಕ್ ಮಹಿಳೆಯ ಮಗನ ಎದುರೇ ಕೋಣೆಯಲ್ಲಿ 79 ದಿನಗಳ ಕಾಲ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.