Advertisement

Odisha; ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡರೆ ನೌಕರರಿಗೆ ಹೆರಿಗೆ ರಜೆ!

11:36 PM Sep 27, 2024 | Team Udayavani |

ಭುವನೇಶ್ವರ: ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುವ ಸರಕಾರಿ ಉದ್ಯೋಗಿಗಳಿಗೆ ಮಾತೃತ್ವ ಮತ್ತು ಪಿತೃತ್ವ ರಜೆ ನೀಡಲು ಒಡಿಶಾ ಸರಕಾರ ನಿರ್ಧರಿಸಿದೆ. ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ 180 ದಿನಗಳವರೆಗೆ ಮಾತೃತ್ವ ರಜೆಯನ್ನು ಮತ್ತು ಪುರುಷ ಉದ್ಯೋಗಿಗಳಿಗೆ 15 ದಿನಗಳವರೆಗೆ ಪಿತೃತ್ವ ರಜೆಯನ್ನು ಪಡೆಯಲು ಆರ್ಹರಾಗಿದ್ದಾರೆ.

Advertisement

ಈ ಪ್ರಯೋಜನವು ಬಾಡಿಗೆ ತಾಯಂದಿರು ಮತ್ತು ಅಂಡಾಣು ಮತ್ತು ವೀರ್ಯಾಣು ದಾನ ಮಾಡುವ ಜೈವಿಕ ತಾಯಿ-ತಂದೆಗೂ ಅನ್ವಯಿಸುತ್ತದೆ. ಮಾತೃತ್ವ-ಪಿತೃತ್ವ ರಜೆ ಪಡೆಯಲು ನೋಂದಾಯಿತ ಆಸ್ಪತ್ರೆಗಳಿಂದ ಪೂರಕ ವೈದ್ಯಕೀಯ ದಾಖಲೆ ಮತ್ತು ಬಾಡಿಗೆ ತಾಯಿ ಮತ್ತು ಜೈವಿಕ ಪೋಷಕರ ನಡುವಿನ ಒಪ್ಪಂದದ ವಿವರವನ್ನೂ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next