Advertisement

ಇದು ಬದುಕಿನ ಕಮಾಲ್…ಸಂಜೆವರೆಗೆ ಇಬ್ಬರೂ ಇಂಜಿನಿಯರ್ಸ್, ಬಳಿಕ ಹೋಟೆಲ್ ಮಾಲಿಕರು!

03:55 PM Sep 25, 2021 | ಸುಹಾನ್ ಶೇಕ್ |
ಬೀದಿ ಬದಿಯ ಬಿರಿಯಾನಿ ಸ್ಟಾಲ್ ವೊಂದು ಮನೆ ಪಕ್ಕ ಇದ್ದ ಕಾರಣ ಅಲ್ಲಿ ಸಂಜೆ ಕೆಲಸವಾದ ಮೇಲೆ ಹೋಗುವುದು ಗೆಳೆಯರಿಬ್ಬರ ಮೆಚ್ಚಿನ ಹವ್ಯಾಸವಾಗಿತ್ತು. ಹೀಗೆ ಪ್ರತಿನಿತ್ಯ ಸ್ಟಾಲ್ ಗೆ ಹೋಗಿ ತಿನ್ನುತ್ತಿದ್ದ ಗೆಳೆಯರಿಬ್ಬರು , ಆ ಅಂಗಡಿಯ ಬಿರಿಯಾನಿ ತಯಾರಿಕೆಯಲ್ಲಿ ಅಷ್ಟೊಂದು ಗುಣಮಟ್ಟ ಇಲ್ಲದ್ದನ್ನು ಗಮನಿಸುತ್ತಾರೆ. ಆದರೂ ಜನ ಅಲ್ಲಿಗೆ ಮುಗಿ ಬೀಳುತ್ತಿದ್ದರು. ಆ ಸಮಯದಲ್ಲಿ ಸುಮಿತ್ ಸಮಲ್ ಮತ್ತು ಪ್ರಿಯಂ ಬೆಬರ್ತಾ ಅವರ ತಲೆಯಲ್ಲಿ, ವೃತ್ತಿಗೆ ಸಂಬಂಧಿಸಿದ ಒಂದು ವಿನೂತನ ಯೋಚನೆ ಬರುತ್ತದೆ...
Now pay only for what you want!
This is Premium Content
Click to unlock
Pay with

*ಸುಹಾನ್ ಶೇಕ್

Advertisement

ಕೆಲವರಿಗೆ ಜೀವನದಲ್ಲಿ ಏನಾದರೂ ಮಾಡಬೇಕೆನ್ನುವ ಆಸೆ ಅಥವಾ ಕನಸು ಆಕಸ್ಮಿಕವಾಗಿ ಯೋಚನಗೆ ಬರುತ್ತದೆ. ಪ್ರಾರಂಭದಿಂದ ಯಾವುದೇ ಗುರಿ ದಾರಿಯಿಲ್ಲದೆ ಯೋಚನೆಗೆ ಬರುವ ಯೋಜನೆಗಳನ್ನು ಯಶಸ್ಸಿನ ದಾರಿಗೆ ತರುವುದು ಅಷ್ಟು ಸುಲಭ ಸಾಧ್ಯದ ಮಾತಲ್ಲ. ಒಳ್ಳೆ ಸಂಬಳದ ಕೆಲಸ, ನೆಮ್ಮದಿಯ ನಿದ್ದೆ, ಗೊಂದಲವಿಲ್ಲದ ಜೀವನ. ಇವಿಷ್ಟು ಇದ್ದರೆ ಸಾಕೆಂದು ಬದುಕನ್ನು ದೂಡುವವರು ಹಲವು ಜನ ಇರುತ್ತಾರೆ. ಒಡಿಶಾದ ಮಲ್ಕನಗಿರಿಯ ಬಾಲ್ಯದ ಇಬ್ಬರು ಗೆಳೆಯರು ಹೀಗೆಯೇ ಇದ್ದರು. ವೃತ್ತಿಯಲ್ಲಿ ಇಂಜಿನಿಯರಿಂಗ್ ಆಗಿರುವ ಸುಮಿತ್ ಸಮಲ್ ಮತ್ತು ಪ್ರಿಯಂ ಬೆಬರ್ತಾ ಕೋವಿಡ್ ಕಾರಣದಿಂದ ಮನೆಯಿಂದನೇ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮ ಊರಿಗೆ ಬರುತ್ತಾರೆ.

ಬೆಳಗ್ಗೆ 9 ರಿಂದ 6 ವರೆಗೆ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವ ಇಬ್ಬರು ಸಂಜೆ ಬಳಿಕ, ಒಂದಿಷ್ಟು ಮಾತಿನೊಂದಿಗೆ ತಿರುಗುತ್ತಾ, ಬಾಯಿ ರುಚಿಗೆ ಬಿರಿಯಾನಿ ತಿಂದು ಮನೆಗೆ ಬರುವುದು ಖಾಯಂ ಅಭ್ಯಾಸವಾಗಿತ್ತು.

ಬೀದಿ ಬದಿಯ ಬಿರಿಯಾನಿ ಸ್ಟಾಲ್ ವೊಂದು ಮನೆ ಪಕ್ಕ ಇದ್ದ ಕಾರಣ ಅಲ್ಲಿ ಸಂಜೆ ಕೆಲಸವಾದ ಮೇಲೆ ಹೋಗುವುದು ಗೆಳೆಯರಿಬ್ಬರ ಮೆಚ್ಚಿನ ಹವ್ಯಾಸವಾಗಿತ್ತು. ಹೀಗೆ ಪ್ರತಿನಿತ್ಯ ಸ್ಟಾಲ್ ಗೆ ಹೋಗಿ ತಿನ್ನುತ್ತಿದ್ದ ಗೆಳೆಯರಿಬ್ಬರು , ಆ ಅಂಗಡಿಯ ಬಿರಿಯಾನಿ ತಯಾರಿಕೆಯಲ್ಲಿ ಅಷ್ಟೊಂದು ಗುಣಮಟ್ಟ ಇಲ್ಲದ್ದನ್ನು ಗಮನಿಸುತ್ತಾರೆ. ಆದರೂ ಜನ ಅಲ್ಲಿಗೆ ಮುಗಿ ಬೀಳುತ್ತಿದ್ದರು. ಆ ಸಮಯದಲ್ಲಿ ಸುಮಿತ್ ಸಮಲ್ ಮತ್ತು ಪ್ರಿಯಂ ಬೆಬರ್ತಾ ಅವರ ತಲೆಯಲ್ಲಿ, ವೃತ್ತಿಗೆ ಸಂಬಂಧಿಸಿದ ಒಂದು ವಿನೂತನ ಯೋಚನೆ ಬರುತ್ತದೆ. ಅದುವೇ ಉತ್ತಮ ಗುಣಮಟ್ಟದೊಂದಿಗೆ, ರುಚಿ ರುಚಿಯಾದ ಬಿರಿಯಾನಿ ನೀಡುವ ಸ್ಟಾಲ್ ವೊಂದನ್ನು ತೆರೆಯಬೇಕೆನ್ನುವುದು.

ಇದೇ ಯೋಚನೆಯನ್ನು ಯೋಜನೆಯ ರೂಪಕ್ಕೆ ತರುವ ನಿಟ್ಟಿನಲ್ಲಿ ಗೆಳೆಯರಿಬ್ಬರು ಮೊದಲು ಬಿರಿಯಾನಿ ಮಾಡಲು ಬೇಕಾದ ಆಹಾರ ಪದಾರ್ಥ , ರೆಸಿಪಿಗಳ ಬಗ್ಗೆ ಅಮ್ಮನ ಕೈಯಿಂದ‌ ನೋಡುತ್ತಾ, ಗೂಗಲ್ ಹಾಗೂ ಯೂಟ್ಯೂಬ್ ನಿಂದ ಕಲಿಯುತ್ತಾ ಒಂದು ಹಂತದವರೆಗೆ ಬಿರಿಯಾನಿ ರುಚಿಯನ್ನು ಗ್ರಾಹಕರಿಗೆ ಬಡಿಸುವ ಅಡುಗೆಯವವರಾಗಿ ಬೆಳೆಯುತ್ತಾರೆ. ಆದರೆ ಸ್ಟಾಲ್ ತರೆಯುವುದಕ್ಕೆ ಒಂದು ಜಾಗ, ಪಾತ್ರೆ , ಸೇರಿದಂತೆ ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಸೆಟ್ ಅಪ್ ಮಾಡಲು, ಇಬ್ಬರು ಉಳಿಸಿಕೊಂಡಿದ್ದ 50 ಸಾವಿರವನ್ನು ಖರ್ಚು ಮಾಡುತ್ತಾರೆ.

Advertisement

ಡಿಸಿ ಆಫೀಸಿನ ಪಕ್ಕದ ರಸ್ತೆಯಲ್ಲಿನ ಒಂದು ಬಾಡಿಗೆ ಕೋಣೆಯೇ ‘ಇಂಜಿನಿಯರ್ಸ್ ಟೆಲಾ’ ಆಗಿ ಬದಲಾಯಿತು. ಅಲ್ಲಿಬ್ಬರು ಅಡುಗೆಯವರನ್ನು ನೇಮಕ ಮಾಡಲಾಯಿತು. ಗ್ರಾಹಕರು ಬಿರಿಯಾನಿ ಸುಗಂಧಕ್ಕೆ ಹೊಟ್ಟೆ ಪೂರ್ತಿ ತಿಂದು ತೇಗು ತೆಗೆದು ಹಣ ಕೊಟ್ಟು ಹೋಗುವವರ ಸಂಖ್ಯೆ ದಿನ‌ ಕಳೆದಂತೆ ಹೆಚ್ಚಾಯಿತು.

‘ಇಂಜಿನಿಯರ್ಸ್ ಟೆಲಾ’ ಸುಸಜ್ಜಿತ ಆಹಾರವನ್ನು ನೀಡಲು ಮೊದಲ ಆದ್ಯತೆ ನೀಡುತ್ತದೆ. ಬಿರಿಯಾನಿಗಾಗಿ ತರುವ ಚಿಕನ್ ಗಳನ್ನು ಸ್ವತಃ ಗೆಳೆಯರಿಬ್ಬರು ಮಾರುಕಟ್ಟೆಗೆ ಹೋಗಿ ತರುತ್ತಾರೆ. ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ಒದಗಿಸಿ, ರುಚಿಯೊಂದಿಗೆ ಗ್ರಾಹಕರ ಮನವೂ ಗೆದ್ದಿದ್ದಾರೆ. ಸದ್ಯ ಇವರ ಹೊಟೇಲ್ ನಲ್ಲಿ ಆನ್ಲೈನ್ ಆರ್ಡರ್ ಮಾತ್ರ ನಡೆಯುತ್ತಿದೆ.

ಚಿಕನ್ ಟಿಕ್ಕಾ ಹಾಗೂ ಚಿಕನ್ ಬಿರಿಯಾನಿಗೆ ಖ್ಯಾತಿಯಾಗಿರುವ ಇಂಜಿನಿಯರ್ಸ್ ಟೆಲಾದಲ್ಲಿ‌ ಒಂದು ಪ್ಲೇಟ್ ಬಿರಿಯಾನಿಗೆ 120 ರೂಪಾಯಿ. ಹಾಫ್ ಪ್ಲೇಟ್ ಗೆ 70 ರೂಪಾಯಿ. ತಿಂಗಳೊಂದಕ್ಕೆ ಇವರಿಬ್ಬರ ಹೊಟೇಲ್ 45 ಸಾವಿರ ಲಾಭ ಗಳಿಸುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಇವರಿಬ್ಬರು ಇಂಜಿನಿಯರ್ಸ್ ಸಂಜೆ ಬಳಿಕ ಹೊಟೇಲ್ ಮಾಲಕರು.! ಇದಕ್ಕೆ ಹೇಳೋದು ಅಲ್ವಾ ಕೆಲ ಯೋಚನೆಗಳು ಆಕಸ್ಮಿಕವಾಗಿ ಬಂದರೂ, ಯೋಜನೆಯ ಕಾರ್ಯಗತ ಗಂಭೀರವಾಗಿರಬೇಕೆಂದು..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More