Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತೆಯಿಂದ ಒತ್ತಾಯ ಪೂರ್ವಕ ನೃತ್ಯ

01:44 PM Sep 03, 2022 | Team Udayavani |

ಒಡಿಶಾ: ಅನಾರೋಗ್ಯದಿಂದ ಬಳಲುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರಿಂದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಆಸ್ಪತ್ರೆಯೊಂದರಲ್ಲಿ ಬಲವಂತವಾಗಿ ನೃತ್ಯ ಮಾಡಿಸಿದ ಘಟನೆ ಕಟಕ್ ಜಿಲ್ಲೆಯಲ್ಲಿ ನಡೆದಿದೆ.

Advertisement

ನಾನು ಅಸ್ವಸ್ಥಗೊಂಡಿದ್ದೆ, ಆದರೂ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಅವರು ನೃತ್ಯ ಮಾಡುವಂತೆ ಒತ್ತಾಯಿಸಿದರು. ಕ್ಯಾಮರಾ ಮುಂದೆ ಧೆಮ್ಸಾ ಡ್ಯಾನ್ಸ್ ಮಾಡುವಂತೆ ಕೇಳಿದರು ಎಂದು ಕಮಲಾ ಪೂಜಾರಿ ಹೇಳಿದ್ದಾರೆ.

ಕಮಲಾ ಪೂಜಾರಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದಾಗ ಬಲವಂತವಾಗಿ ನೃತ್ಯ ಮಾಡಿಸಿರುವುದು ದುರದೃಷ್ಟಕರ. ನಾವು ಈ ವಿಷಯದ ಬಗ್ಗೆ ಮತ್ತಷ್ಟು ವಿಚಾರಿಸುತ್ತೇವೆ ಎಂದು ಜೇಪೋರ್, ಕೋರಾಪುಟ್ ಸಬ್ ಕಲೆಕ್ಟರ್ ಬಿ ಬಿ ಪ್ರಧಾನ್ ಹೇಳಿದ್ದಾರೆ.

ಸಾವಯವ ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ಕಮಲಾ ಪೂಜಾರಿ ಅವರಿಗೆ 2019 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next