ಭುವನೇಶ್ವರ: ಭೋಜ್ ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚರ್ಚೆಯಲ್ಲಿರುವಾಗಲೇ ಮತ್ತೋರ್ವ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಒಡಿಶಾದ ಬೋಲಂಗೀರ್ ಜಿಲ್ಲೆಯ ಸುದಾಪದದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ರುಚಿಸ್ಮಿತಾ ಗುರು ಆತ್ಮಹತ್ಯೆ ಮಾಡಿಕೊಂಡ ನಟಿ. ರುಚಿಸ್ಮಿತಾ ಗುರು ಒಡಿಶಾ ಭಾಷೆಯಲ್ಲಿ ಹತ್ತಾರು ಆಲ್ಬಂ ಸಾಂಗ್ ಗಳಲ್ಲಿ ನಟಿಸಿದ್ದರು. ʼ ದುಲ್ಹನ್ ರಾಣಿʼ, ʼ ಚುರಾ ಪಾಸ್ತಾಬುʼ,ʼಲವ್ ಸ್ಟೋರಿʼ,ʼ ತು ಮೋ ಡ್ರೀಮ್ ಗರ್ಲ್ʼ ಮುಂತಾದ ಆಲ್ಬಂ ಸಾಂಗ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಗಾಯಕಿಯಾಗಿಯೂ ಒಡಿಶಾದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಇದನ್ನೂ ಓದಿ: ಥಿಯೇಟರ್ ಬಳಿಕ ಓಟಿಟಿಯಲ್ಲಿ ʼಕಬ್ಜʼ ಅಬ್ಬರಕ್ಕೆ ಡೇಟ್ ಫಿಕ್ಸ್? : ರಿಲೀಸ್ ಡೇಟ್ ವೈರಲ್
ಕಳೆದ ಕೆಲ ದಿನಗಳಿಂದ ಅಂಕಲ್ ಮನೆಯಲ್ಲಿ ವಾಸಿಸುತ್ತಿದ್ದರು. ಭಾನುವಾರ ರಾತ್ರಿ ( ಮಾ.26 ರಂದು) ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Related Articles
ʼನನ್ನ ಮಗಳಿಗೆ ಯಾವುದೇ ಅವಕಾಶಗಳು ಸಿಗದಿದ್ದಾಗ ಅವಳು ಖಿನ್ನತೆಗೆ ಒಳಗಾಗುತ್ತಿದ್ದಳು. ಆಲಿವುಡ್ ನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದಳು. ನಾಲ್ಕು ವರ್ಷದ ಹಿಂದೆ ನಾನು ನನ್ನ ಮಗನನ್ನು ಕಳೆದುಕೊಂಡೆ. ನನ್ನ ಮಗಳ ಸಾವು ದೊಡ್ಡ ಆಘಾತವನ್ನು ನೀಡಿದೆ ಎಂದು ನಟಿಯ ತಂದೆ ಹೇಳಿದ್ದಾರೆ.
ಮಗಳಿಗೆ 8 ಗಂಟೆಯ ಹೊತ್ತಿಗೆ ಆಲೂ ಪರಾಠ ಮಾಡಲು ಹೇಳಿದ್ದೆ ಅವಳು, 10 ಗಂಟೆಗೆ ಮಾಡುತ್ತಾಳೆ ಹೇಳಿದ್ದಳು. ಈ ವಿಚಾರವಾಗಿ ನಮ್ಮ ನಡುವೆ ಗಲಾಟೆ ಆಯಿತು. ಅವಳು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ನಟಿಯ ತಾಯಿ ಹೇಳಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.