ಮುಂಬೈ: ಐಸಿಸಿ ಪುರುಷರ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಈ ಬಾರಿ ಭಾರತದಲ್ಲಿ ನಡೆಯುವ ಕೂಟದ ವಿವರವಾದ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಪ್ರಕಟಿಸಿಲ್ಲ. ಆದರೆ ಸೆಮಿಫೈನಲ್ ಮತ್ತು ಫೈನಲ್ ಎಲ್ಲಿ ನಡೆಯಬಹುದು ಎಂಬುದರ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ.
ಕ್ರಿಕ್‌ಬಜ್ ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವಕಪ್ ಫೈನಲ್ ನ ಆತಿಥ್ಯ ವಹಿಸಲಿದೆ. 2011ರ ವಿಶ್ವಕಪ್ ಫೈನಲ್ ನಡೆದಿದ್ದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಒಂದು ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…
2011ರ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದೆ. ಈ ಬಾರಿ ವಿಶ್ವಕಪ್‌ನ 48 ಪಂದ್ಯಗಳನ್ನು ಆಯೋಜಿಸಲು ಭಾರತದಲ್ಲಿ ಒಟ್ಟು 12 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.
Related Articles
ಪಾಕಿಸ್ತಾನದ ಪಂದ್ಯಗಳನ್ನು ಭಾರತದಿಂದ ಹೊರಗೆ, ಬಹುಶಃ ಬಾಂಗ್ಲಾದೇಶದಲ್ಲಿ ಆಯೋಜಿಸಬಹುದು ಎಂಬ ಸುದ್ದಿಯನ್ನು ಈ ವರದಿಯು ತಳ್ಳಿ ಹಾಕಿದೆ. ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿಲ್ಲ ಮತ್ತು ಭಾರತದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಂಡಳಿಯಿಂದ ಸಂಪೂರ್ಣ ಬೆಂಬಲವನ್ನು ನೀಡಲಾಗಿದೆ.
ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸುವ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ವೆಬ್ ಸೈಟ್ ಸೇರಿಸಿದೆ.
ಅಕ್ಟೋಬರ್-ನವೆಂಬರ್ ನಲ್ಲಿ ವಿಶ್ವಕಪ್ ಭಾರತದಲ್ಲಿ ನಡೆಯಲು ನಿರ್ಧರಿಸಲಾಗಿದೆ ಆದರೆ ಬಿಸಿಸಿಐ ಮತ್ತು ಐಸಿಸಿ ಇನ್ನೂ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಭಾರತ-ಪಾಕಿಸ್ತಾನದ ದೊಡ್ಡ ಪಂದ್ಯಕ್ಕೆ ದೆಹಲಿ ಮತ್ತು ಚೆನ್ನೈ ಸ್ಥಳದ ಆಯ್ಕೆಗಳೆಂದು ಅಂದಾಜು ಮಾಡಲಾಗಿದೆ ಆದರೆ ಯಾವುದನ್ನೂ ದೃಢೀಕರಿಸಲಾಗಿಲ್ಲ.