Advertisement

ದ್ವಿತೀಯ ಪಂದ್ಯ: ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ಗೆ ಸೋಲು; ಆಸ್ಟ್ರೇಲಿಯಕ್ಕೆ ಏಕದಿನ ಸರಣಿ

11:32 PM Nov 19, 2022 | Team Udayavani |

ಸಿಡ್ನಿ: ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 72 ರನ್ನುಗಳ ಭಾರೀ ಅಂತರದಿಂದ ಕೆಡವಿದ ಆಸ್ಟ್ರೇಲಿಯ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

Advertisement

ಸಿಡ್ನಿಯಲ್ಲಿ ಸಿಡಿದು ನಿಂತ ಆಸ್ಟ್ರೇಲಿಯ 8 ವಿಕೆಟ್‌ ನಷ್ಟಕ್ಕೆ 280 ರನ್‌ ಪೇರಿಸಿದರೆ, ಇಂಗ್ಲೆಂಡ್‌ 38.5 ಓವರ್‌ಗಳಲ್ಲಿ 208ಕ್ಕೆ ಆಲೌಟ್‌ ಆಯಿತು. ಅಡಿಲೇಡ್‌ನ‌ಲ್ಲಿ ನಡೆದ ಮೊದಲ ಪಂದ್ಯವನ್ನು ಕಾಂಗರೂ ಪಡೆ 6 ವಿಕೆಟ್‌ಗಳಿಂದ ಗೆದ್ದಿತ್ತು.

ಮಿಚೆಲ್‌ ಸ್ಟಾರ್ಕ್‌ ಮೊದಲ ಓವರ್‌ನಲ್ಲೇ ಜೇಸನ್‌ ರಾಯ್‌ ಮತ್ತು ಡೇವಿಡ್‌ ಮಲಾನ್‌ ಅವರನ್ನು ಶೂನ್ಯಕ್ಕೆ ಕೆಡವಿ ಇಂಗ್ಲೆಂಡಿಗೆ ಮರ್ಮಾಘಾತವಿಕ್ಕಿದರು.

ನಡುವೆ ಜೇಮ್ಸ್‌ ವಿನ್ಸ್‌ (60) ಮತ್ತು ಸ್ಯಾಮ್‌ ಬಿಲ್ಲಿಂಗ್ಸ್‌ (71) ಹೋರಾಟವೊಂದನ್ನು ಸಂಘಟಿಸಿದರೂ ಈ ಜೋಡಿ ಬೇರ್ಪಟ್ಟ ಬಳಿಕ ಆಸೀಸ್‌ ದಾಳಿ ತೀವ್ರಗೊಂಡಿತು. ಸ್ಟಾರ್ಕ್‌ ಸಾಧನೆ 47ಕ್ಕೆ 4 ವಿಕೆಟ್‌.

ಆಸೀಸ್‌ ಬ್ಯಾಟಿಂಗ್‌ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಸ್ಟೀವನ್‌ ಸ್ಮಿತ್‌ 6 ರನ್ನಿನಿಂದ ಶತಕ ವಂಚಿತರಾದರು (94). ಮಾರ್ನಸ್‌ ಲಬುಶೇನ್‌ 58, ಮಿಚೆಲ್‌ ಮಾರ್ಷ್‌ 50 ರನ್‌ ಹೊಡೆದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next