Advertisement
ಪಾಕ್ ವಿರುದ್ಧದ ಸರಣಿಯಲ್ಲಿ 367 ರನ್ ಬಾರಿಸಿದ್ದು ವಾರ್ನರ್ ಅವರ ಪ್ರಚಂಡ ಫಾರ್ಮ್ಗೆ ಸಾಕ್ಷಿ. ಕಳೆದ 11 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ ಹೊಡೆದ ಶತಕಗಳ ಸಂಖ್ಯೆ 6ಕ್ಕೆ ಏರಿದೆ. 2016ರ ಜನವರಿಯಿಂದೀಚೆ ಆಡಿದ 28 ಪಂದ್ಯಗಳಿಂದ 1,755 ರನ್ ಪೇರಿಸಿದ ಹೆಗ್ಗಳಿಕೆ ಈ ಆಸೀಸ್ ಕ್ರಿಕೆಟಿಗನದ್ದು. ದ್ವಿತೀಯ ಸ್ಥಾನಿ ಡಿ ವಿಲಿಯರ್ ಮತ್ತು ವಾರ್ನರ್ ನಡುವೆ 19 ಅಂಕಗಳ ಅಂತರವಿದೆ. ಕೊಹ್ಲಿ 852 ಅಂಕ ಹೊಂದಿದ್ದಾರೆ.
ಬೌಲಿಂಗ್ ವಿಭಾಗದ ಅಗ್ರಸ್ಥಾನ ನ್ಯೂಜಿಲ್ಯಾಂಡಿನ ಟ್ರೆಂಟ್ ಬೌಲ್ಟ್ ಮೊದಲ ಸ್ಥಾನದಲ್ಲಿದ್ದು, 2 ಸ್ಥಾನಗಳ ಭಡ್ತಿ ಪಡೆದ ಮಿಚೆಲ್ ಸ್ಟಾರ್ಕ್ ಎರಡಕ್ಕೆ ಬಂದು ನಿಂತಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಭಾರತದ ಯಾವುದೇ ಬೌಲರ್‌ಗಳಿಲ್ಲ.
Related Articles
Advertisement
ಟಾಪ್-10 ಬ್ಯಾಟ್ಸ್‌ಮನ್ 1. ಡೇವಿಡ್ ವಾರ್ನರ್ (880) 2. ಎಬಿ ಡಿ ವಿಲಿಯರ್ (861) 3. ವಿರಾಟ್ ಕೊಹ್ಲಿ (852)
4. ಕ್ವಿಂಟನ್ ಡಿ ಕಾಕ್ (779)
5. ಕೇನ್ ವಿಲಿಯಮ್ಸನ್ (770)
6. ಜೋ ರೂಟ್ (753)
7. ಹಾಶಿಮ್ ಆಮ್ಲ (748)
8. ಸ್ಟೀವನ್ ಸ್ಮಿತ್ (740)
9. ಮಾರ್ಟಿನ್ ಗಪ್ಟಿಲ್ (735)
10. ಬಾಬರ್ ಆಜಂ (733) ಟಾಪ್-10 ಬೌಲರ್
1. ಟ್ರೆಂಟ್ ಬೌಲ್ಟ್ (718)
2. ಮಿಚೆಲ್ ಸ್ಟಾರ್ಕ್ (713)
3. ಇಮ್ರಾನ್ ತಾಹಿರ್ (712)
4. ಸುನೀಲ್ ನಾರಾಯಣ್ (711)
5. ಹ್ಯಾಝಲ್‌ವುಡ್ (672)
6. ಶಕಿಬ್ ಅಲ್ ಹಸನ್ (643)
7. ಮ್ಯಾಟ್ ಹೆನ್ರಿ (641)
8. ಕ್ಯಾಗಿಸೊ ರಬಾಡ (628)
9. ಆದಿಲ್ ರಶೀದ್ (628)
10. ಮೊಹಮ್ಮದ್ ನಬಿ (619)