Advertisement

ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌: ಸ್ಮತಿ ಮಂಧನಾ ಕುಸಿತ

11:48 PM Jul 12, 2022 | Team Udayavani |

ದುಬಾೖ: ಓಪನರ್‌ ಸ್ಮತಿ ಮಂಧನಾ ನೂತನ ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿದು 9ಕ್ಕೆ ಬಂದಿದ್ದಾರೆ. ಶ್ರೀಲಂಕಾ ಎದುರಿನ ಸರಣಿಗೂ ಮುನ್ನ ಮಂಧನಾ 8ನೇ ಸ್ಥಾನದಲ್ಲಿದ್ದರು.

Advertisement

ಸರಣಿಯ 2ನೇ ಪಂದ್ಯದಲ್ಲಿ ಮಂಧನಾ ಅಜೇಯ 94 ರನ್‌ ಹೊಡೆದಿದ್ದರು. ಆದರೆ ಉಳಿದೆರಡು ಪಂದ್ಯಗಳಲ್ಲಿ ಮಿಂಚಲಿಲ್ಲ (4 ಮತ್ತು 6 ರನ್‌). ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಒಂದು ಸ್ಥಾನ ಮೇಲೇರಿದ್ದು, 13ಕ್ಕೆ ಬಂದಿದ್ದಾರೆ. ಶಫಾಲಿ ವರ್ಮ ಅವರದು 3 ಸ್ಥಾನಗಳ ಜಿಗಿತವಾದರೆ (33), ಪೂಜಾ ವಸ್ತ್ರಾಕರ್‌ 8 ಸ್ಥಾನ ಮೇಲೇರಿ 53ಕ್ಕೆ ಬಂದು ನಿಂತಿದ್ದಾರೆ.

ದೀಪ್ತಿ ಶರ್ಮ ಆಲ್‌ರೌಂಡರ್‌ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ ದೀಪ್ತಿ 6 ವಿಕೆಟ್‌ ಕೆಡವಿದ್ದರು. ಮೊದಲ ಪಂದ್ಯದಲ್ಲಿ ಅಜೇಯ 22 ರನ್‌ ಹೊಡೆದು ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬೌಲಿಂಗ್‌ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್‌ 10ರಿಂದ 8ನೇ ಸ್ಥಾನಕ್ಕೇರಿದರು. ಅಂತಿಮ ಪಂದ್ಯದಲ್ಲಿ 36ಕ್ಕೆ 3 ವಿಕೆಟ್‌ ಉರುಳಿಸಿದ ಸಾಧನೆ ರಾಜೇಶ್ವರಿ ಅವರದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next