Advertisement

ODI; ಪ್ರವಾಸಿ ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಬಾಂಗ್ಲಾ

11:32 PM Mar 18, 2024 | Team Udayavani |

ಚತ್ತೋಗ್ರಾಮ್‌ (ಬಾಂಗ್ಲಾದೇಶ): ಪ್ರವಾಸಿ ಶ್ರೀಲಂಕಾ ಎದುರಿನ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಿಂದ ಜಯಿಸಿದೆ. ಸೋಮವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ಪಡೆ 4 ವಿಕೆಟ್‌ಗಳಿಂದ ಲಂಕೆಯನ್ನು ಮಣಿಸಿತು.

Advertisement

ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ 50 ಓವರ್‌ಗಳಲ್ಲಿ 235ಕ್ಕೆ ಆಲೌಟ್‌ ಆದರೆ, ಬಾಂಗ್ಲಾ 40.2 ಓವರ್‌ಗಳಲ್ಲಿ 6 ವಿಕೆಟಿಗೆ 237 ರನ್‌ ಬಾರಿಸಿತು.
ಲಂಕಾ ಸರದಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ ಜನಿತ್‌ ಲಿಯನಗೆ ಅಜೇಯ 101 ರನ್‌ ಬಾರಿಸಿದರು (102 ಎಸೆತ, 11 ಬೌಂಡರಿ, 2 ಸಿಕ್ಸರ್‌). ಬಾಂಗ್ಲಾ ಪರ ಆರಂಭಕಾರ ತಾಂಜಿದ್‌ ಹಸನ್‌ 84, ರಿಶಾದ್‌ ಹುಸೇನ್‌ ಅಜೇಯ 48 ರನ್‌ ಮಾಡಿದರು.

ತಾಂಜಿದ್‌ ಹಸನ್‌ “ಕನ್‌ಕಶನ್‌ ಸಬ್‌ಸ್ಟಿಟ್ಯೂಟ್‌’ ಆಗಿ ಅವಕಾಶ ಪಡೆದಿದ್ದರು. ಕ್ಯಾಚ್‌ ಪಡೆಯುವ ವೇಳೆ ಅನಾಮುಲ್‌ ಹಕ್‌ ಮತ್ತು ಜಾಕರ್‌ ಅಲಿ ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದರು. ಜಾಕರ್‌ ಅಲಿ ಅವರ ತಲೆಗೆ ಏಟು ಬಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾದರು. ಇವರ ಬದಲು ತಾಂಜಿದ್‌ ಆಡುವ ಅವಕಾಶ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next