Advertisement

ಹಬ್ಬಗಳ ಹಿನ್ನೆಲೆ: ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಹೆಚ್ಚಳ

07:15 PM Nov 01, 2022 | Team Udayavani |

ನವದೆಹಲಿ: ದಸರೆ, ದೀಪಾವಳಿ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಕಾರುಗಳ ಮಾರಾಟವಾಗಿದೆ. ಜನವರಿಂದ ಸೆಪ್ಟೆಂಬರ್‌ ವರೆಗಿನ ಮಾರಾಟದ ವಿವರಗಳನ್ನು ಗಮನಿಸಿದರೆ, ಕಳೆದ ತಿಂಗಳ ಅಂಕಿಅಂಶವೇ ಹೆಚ್ಚಾಗಿದೆ.

Advertisement

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ತಗ್ಗಿದ್ದ ಕಾರು ಮಾರಾಟ ಇದೀಗ ಪುನಃ ಪುನಶ್ಚೇತನ ಪಡೆದಿದೆ.

ಅಕ್ಟೋಬರ್‌ನಲ್ಲಿ ದೇಶದಲ್ಲಿ ಒಟ್ಟು 3,75,000ದಿಂದ 3,85,000 ಕಾರುಗಳು ಮಾರಾಟವಾಗಿವೆ. ಈ ಮೂಲಕ ಕಂಪನಿಗಳ ವಾಹನಗಳ ದಾಸ್ತಾನು ಶೇ.25ರಷ್ಟು ಕಡಿಮೆಯಾಗಿದೆ ಎಂದು ಕಾರು ಉದ್ಯಮದ ಪ್ರಮುಖರು ಮಾಹಿತಿ ನೀಡಿದ್ದಾರೆ. 2020ರ ಅಕ್ಟೋಬರ್‌ನಲ್ಲಿ 3,70,416 ಕಾರುಗಳು ಮಾರಾಟವಾಗಿತ್ತು.

ಎಸ್‌ಯುವಿಗೆ ದಂಬಾಲು:
ಪ್ರಸ್ತುತ ಹೊಸ ಮಾದರಿ ಕಾರುಗಳಿಗೆ, ವಿಶೇಷವಾಗಿ ಮಾರುತಿ ಸುಜುಕಿ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಟಾಟಾ ಪಂಚ್‌ ಹಾಗೂ ಮಹೀಂದ್ರ ಸ್ಕಾರ್ಪಿಯೊದಂತಹ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಕಾರು ಕಂಪನಿಗಳಿಗೆ 8,00,000ದಿಂದ 8,50,000 ಕಾರುಗಳಿಗೆ ಆರ್ಡರ್‌ ಬಂದಿದೆ. ಈ ವರ್ಷ ಅಂತ್ಯದವರೆಗೂ ಕಾರುಗಳಿಗೆ ಡಿಮ್ಯಾಂಡ್‌ ಹೀಗೆ ಮುಂದುವರಿಯಲಿದೆ ಎಂಬ ನಿರೀಕ್ಷೆ ಇದೆ ಎಂದು ಕಾರು ಡೀಲರ್‌ಗಳು ತಿಳಿಸಿದ್ದಾರೆ.

ಗ್ರ್ಯಾಂಡ್ ವಿಟಾರಾಗೆ ಹೆಚ್ಚಿನ ಡಿಮ್ಯಾಂಡ್‌:
ಮಾರುತಿ ಸುಜುಕಿ 2022ರ ಸೆಪ್ಟೆಂಬರ್‌ವರೆಗೆ 4,12,000 ಕಾರುಗಳ ಡೆಲಿವರಿ ಬಾಕಿ ಇತ್ತು. ಈ ಪೈಕಿ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾಗೆ ಹೆಚ್ಚಿನ ಆರ್ಡರ್‌ ಬಂದಿದೆ. ಅಕ್ಟೋಬರ್‌ನಲ್ಲಿ ಕಿಯಾ ಕಂಪನಿಯ ಕಾರುಗಳ ಮಾರಾಟ ಶೇ.40ರಷ್ಟು ಹೆಚ್ಚಿದೆ.

Advertisement

ಶೇ.60ರಷ್ಟು ಹೆಚ್ಚಳ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಮಹಿಂದ್ರಾ ಕಾರುಗಳ ಮಾರಾಟ ಶೇ.60ರಷ್ಟು ಹೆಚ್ಚಳವಾಗಿದೆ. ಕಳೆದ ತಿಂಗಳು ಒಟ್ಟು 32,298 ಕಾರುಗಳ ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳು 20,130 ಕಾರುಗಳು ಮಾರಾಟವಾಗಿತ್ತು.

ಟಾಟಾ ಕಾರುಗಳ ಮಾರಾಟ ಶೇ.33ರಷ್ಟು ಹೆಚ್ಚಳ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಕಾರುಗಳ ಮಾರಾಟ ಶೇ.33ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ಒಟ್ಟು 45,423 ಟಾಟಾ ಕಾರುಗಳ ಮಾರಾಟವಾಗಿವೆ. ಸೆಪ್ಟೆಂಬರ್‌ನಲ್ಲಿ ಇದಕ್ಕೂ ಹೆಚ್ಚು ಅಂದರೆ 47,000 ಟಾಟಾ ಕಾರುಗಳ ಮಾರಾಟವಾಗಿತ್ತು. ಇವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ

3,75,000ದಿಂದ 3,85,000- ಒಟ್ಟು ಕಾರುಗಳ ಮಾರಾಟ
ಶೇ.60- ಮಹೀಂದ್ರಾ
ಶೇ.40- ಕಿಯಾ
ಶೇ.30- ಟಾಟಾ

Advertisement

Udayavani is now on Telegram. Click here to join our channel and stay updated with the latest news.

Next