Advertisement

ಕುಣಿಗಲ್ ಪುರಸಭೆ ಜಾಗದಲ್ಲಿ ಆಕ್ರಮ ಕಟ್ಟಡ: ಮಾಲೀಕ ಪೊಲೀಸರ ವಶಕ್ಕೆ 

06:13 PM Nov 25, 2021 | Team Udayavani |

ಕುಣಿಗಲ್: ಪುರಸಭೆ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ, ಮನೆ ನಿರ್ಮಾಣ ಮಾಡುತ್ತಿದ್ದ ಕಟ್ಟಡವನ್ನು ತೀವ್ರ ವಿರೋಧ, ವಾಗ್ವಾದ ನಡುವೆಯೂ ಪುರಸಭೆ ಮುಖ್ಯಾಧಿಕಾರಿ ಕೆ.ಪಿ ರವಿಕುಮಾರ್ ಅವರ ನೇತೃತ್ವದ ಅಧಿಕಾರಿಗಳ ತಂಡ ಪೊಲೀಸರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ಗುರುವಾರ ಕಟ್ಟಡ ತೆರವುಗೊಳಿಸಿದರು.

Advertisement

ಪಟ್ಟಣದ 20 ನೇ ವಾರ್ಡ್ ಬೋವಿಕಾಲೋನಿಯಲ್ಲಿ ಪುರಸಭೆಗೆ ಸೇರಿದ ಖಾತಾ ನಂ 105/359 ನ 17 ಅಡಿ ಉದ್ದ 40 ಅಡಿ ಅಗಲದ ಜಾಗದಲ್ಲಿ ಗೋವಿಂದರಾಜು ಅತಿಕ್ರಮ ಪ್ರವೇಶಿಸಿ ಮನೆ ನಿರ್ಮಿಸಿದ್ದು, ಕಟ್ಟಡ ಮೋಲ್ಡ್ ಮಟ್ಟದವರಿಗೆ ಬಂದಿತು, ಈ ಸಂಬಂಧ ಪುರಸಭೆಯಿಂದ ಹಲವು ಭಾರಿ ಕಟ್ಟಡ ನಿರ್ಮಾಣ ಮಾಡಬಾರದೆಂದು ಗೋವಿಂದರಾಜು ಅವರಿಗೆ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದರು, ಇದ್ಯಾವುದನ್ನು ಲೆಕ್ಕಿಸದೇ ಕಟ್ಟಡ ಕಾಮಗಾರಿಯನ್ನು ಮುಂದುವರೆಸಿದರು, ಜೊತೆಗೆ ಗೃಹೋಪಯೋಗಿ ವಸ್ತುಗಳನ್ನು ಕಟ್ಟಡದಲ್ಲಿ ಇಟ್ಟುಕೊಂಡು ವಾಸ ಮಾಡುತ್ತಿದ್ದರು, ಪುರಸಭಾ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಎಂಜಿನಿಯರ್ ಚಂದ್ರಶೇಖರ್ ನೇತೃತ್ವದ ಸಿಬ್ಬಂದಿಗಳು ಕಟ್ಟಡವನ್ನು ತೆರವುಗೊಳಿಸಿದರು.

ಇದನ್ನೂ ಓದಿ:ರೇಪ್ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಆಯುಕ್ತರಿಗೆ 8 ರ ಬಾಲೆಯ ಮನವಿ

ತೆರವಿಗೆ ವಿರೋಧ, ವಾಗ್ವಾದ

ಕಟ್ಟಡ ತೆರವುಗೊಳಿಸುವುದನ್ನು ಗೋವಿಂದರಾಜು ಹಾಗೂ ಅವರ ಮನೆಯವರು ತೀವ್ರವಾಗಿ ವಿರೋಧಿಸಿದರು. ಪುರಸಭೆಗೆ ಸೇರಿದ ಜಾಗದಲ್ಲಿ ಕಟ್ಟಡ ಕಟ್ಟುತ್ತಿಲ್ಲ. ನನಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇನೆ. ವಿನಾಕಾರಣ ನಮಗೆ ತೊಂದರೆ ನೀಡಿ, ಕಟ್ಟಡ ಕೆಡವುತ್ತಿದ್ದೀರಿ. ವಾಸ ಮಾಡಲು ಇದೊಂದು ಜಾಗ ಬಿಟ್ಟರೇ ಬೇರೆ ಯಾವುದೇ ನಮಗೆ ಜಾಗವಿಲ್ಲ. ನನ್ನ ಹೆಂಡತಿ ಮಕ್ಕಳು ಎಲ್ಲಿ ವಾಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಗೋವಿಂದರಾಜು ತೆರವುಗೊಳಿಸಲು ಒಂದು ವಾರ ಅವಕಾಶ ಕೊಡಿ ಇಲ್ಲವಾದಲ್ಲಿ ಕಟ್ಟಡ ನೆಲ ಸಮಗೊಳಿಸಲು ಬಿಡುವುದಿಲ್ಲ ಎಂದು ಏರಿದ ದ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಯಾವುದೇ ಕಾರಣಕ್ಕೂ ಇನ್ನೂ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯಾಧಿಕಾರಿ ರವಿಕುಮಾರ್ ಸ್ಪಷ್ಟಪಡಿದರು. ಇದರಿಂದ ಆಕ್ರೋಶಗೊಂಡ ಗೋವಿಂದರಾಜು ಕಟ್ಟಡ ಕೆವಲು ಬಿಡುವುದಿಲ್ಲ ಎಂದು ತೆರವು ಕಾರ್ಯಚರಣೆಗೆ ಅಡ್ಡಿ ಪಡಿಸಿ ಬಾಗಿಲು ಬಳಿ ಮಲಗಿ ಪ್ರತಿಭಟಿಸಿದರು. ಈ ನಡುವೆ ಗೊವಿಂದರಾಜು ಹಾಗೂ ಪುರಸಭಾ ಅಧಿಕಾರಿಗಳ ನಡುವೆ ಬಿರುಸಿನ ಮಾತಿನ ಚಕಾಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಚರಣೆಗೆ ಅಡ್ಡಿ ಪಡಿಸಿದ ಗೋವಿಂದರಾಜುನನ್ನು ವಶಕ್ಕೆ ಪಡೆದು ಕಾರ್ಯಚರಣೆಗೆ ಅನುಕೂಲ ಮಾಡಿಕೊಟ್ಟರು,

ಪುರಸಭೆಗೆ ಸೇರಿರುವ ಸ್ವತ್ತಿನಲ್ಲಿ ಅಕ್ರಮ ಪ್ರವೇಶಿಸಿ ಯಾರೇ ಕಟ್ಟಡ ನಿರ್ಮಿಸಿದರೂ ಅದನ್ನು ವಿರೋಧಿಸುತ್ತೇನೆ, ಆದರೆ ಪಟ್ಟಣದ ಹಲವು ಭಾಗಗಳಲ್ಲಿ ಬಲಾಡ್ಯ ವ್ಯಕ್ತಿಗಳು, ಪುರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ ಈ ಸಂಬಂಧ ಪುರಸಭೆ ಸಾಮಾನ್ಯ ಸಭೆಗಳಲ್ಲಿ ಆನೇಕ ಮಂದಿ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದು ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಆದರೆ ಆ ಕಟ್ಟಡಗಳನ್ನು ತೆರವುಗೊಳಿಸದ ಅಧಿಕಾರಿಗಳು ಪರಿಶಿಷ್ಟ ಜಾತಿಯ ಬೋವಿ ಸಮುದಾಯದ ಬಡ ಕುಟುಂಬವು ಕಟ್ಟಡ ಕಟ್ಟಿಕೊಂಡಿರುವುದನ್ನು ಏಕಾಏಕಿ ಕೆಡವಿ ಆ ಕುಟುಂಬವನ್ನು ಬೀದಿಗೆ ತಂದಿದ್ದಾರೆ. ತೆರವುಗೊಳಿಸಲು ಒಂದು ವಾರ ಅವಕಾಶ ನೀಡಿ ಎಂದು ಮನೆಯ ಮಾಲೀಕ ಗೋವಿಂದರಾಜು ಮನವಿ ಮಾಡಿದರು. ಇದನ್ನು ಗಣನೆಗೆ ತೆಗೆದುಕೊಳ್ಳದೇ ಕಟ್ಟಡವನ್ನು ತೆರವುಗೊಳಿಸಿದ ದರ್ಪ ತೋರಿಸಿದ್ದಾರೆ. ಅನಂದ್‌ಕುಮಾರ್ 20 ನೇ ವಾರ್ಡ್ ಪುರಸಭಾ ಸದಸ್ಯ  

Advertisement

Udayavani is now on Telegram. Click here to join our channel and stay updated with the latest news.

Next