Advertisement

ರಾಜಕಾಲುವೆ ಒತ್ತುವರಿ ಮಾಡಿದವರು ಕ್ರಮ ಅನುಭವಿಸುತ್ತಾರೆ: ಸಿಎಂ ಬೊಮ್ಮಾಯಿ ಎಚ್ಚರಿಕೆ

03:37 PM Sep 12, 2022 | Team Udayavani |

ಬೆಂಗಳೂರು: ಯಾರು ರಾಜಕಾಲುವೆ ಒತ್ತುವರಿ ಮಾಡಿದ್ದಾರೋ ಅವರು ಕ್ರಮ ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೇ ಅಡ್ಡಿಪಡಿಸಿದರೂ ತೆರವಿಗೆ ಸೂಚನೆ ನೀಡಿದ್ದೇವೆ. ಅದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಎಲ್ಲರಿಗೂ ಕೂಡ ಮಳೆಯಿಂದ ತೊಂದರೆಯಾಗಿದೆ. ತೆರವು ಮಾಡುವುದು ಪ್ರಾರಂಭವಾಗಿದೆ ನಿಲ್ಲುವುದಿಲ್ಲ ಎಂದು ಹೇಳಿದರು.

ಈಗಾಗಲೇ ಹಲವು ಪ್ರಕರಣ ಕೋರ್ಟ್ ನಲ್ಲಿವೆ. ಕೋರ್ಟ್ ಕೂಡ ಒತ್ತುವರಿ ತೆರವು ಮಾಡಿ ಎಂದಿದೆ. ಈ ಬಾರಿ ನಾವು ನಿಲ್ಲಿಸಲ್ಲ, ತೆರವು ಮಾಡಿಯೇ ಮಾಡುತ್ತೇವೆ. ಮಳೆಯಿಂದ ಐಟಿ ಬಿಟಿಯವರಿಗೂ ತೊಂದರೆಯಾಗಿದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆಯಾಗಿದೆ. ಜನ ಸಾಮಾನ್ಯರಿಗೂ ತೊಂದರೆಯಾಗಿದೆ. ತೆರವು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ:ದೇಶದಲ್ಲೇ ರಾಜ್ಯದ ಘನತೆ ಹೆಚ್ಚಿತ್ತು, ಆದರೆ ಬಿಜೆಪಿ…. : ಎಂ.ಬಿ.ಪಾಟೀಲ್ ಕಿಡಿ

ಬಸವರಾಜ ದಡೆಸಗೂರು ಆಡಿಯೋ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಹಾಗೇನಾದ್ರೂ ಇದ್ದರೆ ತನಿಖೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

ಗುಡುಗಿದ ಅಶೋಕ್: ಬೆಂಗಳೂರಿನಲ್ಲಿರುವ ಐಟಿ, ಬಿಟಿ ಕಂಪನಿಗಳ ವಿರುದ್ಧ ಸಚಿವ ಅಶೋಕ್ ಗುಡುಗಿದ್ದು, ಸುಮಾರು 25-30 ಐಟಿ ಕಂಪನಿಗಳು ಒತ್ತುವರಿ ಮಾಡಿಕೊಂಡಿವೆ. ಯಾವುದೇ ಪ್ರಭಾವಕ್ಕೂ ಒಳಗಾಗದೆ ಎಲ್ಲವನ್ನೂ ತೆರವುಗೊಳಿಸುತ್ತೇವೆ. ಬೆಂಗಳೂರಿನಿಂದ ಯಾರೂ ಹೊರ ಹೋಗುತ್ತಿಲ್ಲ. ಯಾರೋ ಕೆಲವರಷ್ಟೇ ಈ ಮಾತನ್ನಾಡುತ್ತಿದ್ದಾರೆ. ಹೊರಗಿನಿಂದಲೇ ಇಲ್ಲಿಗೆ ಬರುತ್ತಿದ್ದಾರೆ ಹೊರತು ಹೋಗುತ್ತಿಲ್ಲ ಎಂದರು.

ಎಲ್ಲರದ್ದೂ ಜವಾಬ್ದಾರಿ: ಬೆಂಗಳೂರು ಮಳೆ ಹಾನಿ ವಿಚಾರದಲ್ಲಿ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಶಾಸಕ ಸತೀಶ್ ರೆಡ್ಡಿ, ಬೆಂಗಳೂರಿಗೆ ಪ್ರತ್ಯೇಕ ಉಸ್ತುವಾರಿ ಸಚಿವರು ಇದ್ದರೂ ಕೂಡ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಿಎಂಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇದೆ. ನಾವೆಲ್ಲ ಒತ್ತಡ ತಂದಾಗ ಸಿಎಂ ಬೇಗ ಹಣ ಬಿಡುಗಡೆ ಮಾಡಿದ್ದಾರೆ. ಶಾಸಕಾಂಗ ಸಭೆಯೂ ಕೂಡ ನಾಳೆ ಇದೆಕಾಂಗ್ರೆಸ್ ನವರಿಗೆ ಮಾತ್ರ ಬೆಂಗಳೂರಿನ ಬಗ್ಗೆ ಕಾಳಜಿ ಇರುವುದಲ್ಲ. ಮಳೆಯ ಸಂದರ್ಭ ರಾಜಕಾರಣ ಮಾಡುವುದು ಬೇಡ ಎಂದರು.

ನಮ್ಮ ಬೆಂಗಳೂರಿನ ಬಗ್ಗೆ ನಾವೇ ಕೆಟ್ಟದಾಗಿ ಮಾತನಾಡುವುದು ಬೇಡ. ಬ್ರ್ಯಾಂಡ್ ಬೆಂಗಳೂರಿನ ಹೆಸರನ್ನು ನಾವೇ ಕೆಟ್ಟದಾಗಿ ಮಾತನಾಡಿ ಕೆಡಿಸುವುದು ಬೇಡ. ಬಿಜೆಪಿ ಎಂಎಲ್ಎ ಗಳದ್ದು ಮಾತ್ರ ಜವಾಬ್ದಾರಿ ನಾ? ಕಾಂಗ್ರೆಸ್ ಶಾಸಕರಿಗೆ ಜವಾಬ್ದಾರಿ ಇಲ್ಲವೇ? ಎಲ್ಲ ಕ್ಷೇತ್ರಗಳಲ್ಲೂ ಆಯಾಯ ಶಾಸಕರು ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next