ಹೈದರಾಬಾದ್: ಟಾಲಿವುಡ್ ಟಿವಿ ರಂಗದಲ್ಲಿ ತನ್ನ ನಿರೂಪಣೆಯಿಂದಲೇ ಖ್ಯಾತಿಗಳಿಸಿರುವ ಅನಸೂಯ ಭಾರದ್ವಾಜ್ ಮತ್ತೆ ನಕಲಿ ಖಾತೆಗಳನ್ನು ತೆರೆದು ಅಶ್ಲೀಲ ಫೋಟೋಗಳನ್ನು ಹರಿದು ಬಿಡಲಾಗಿದೆ.
ಇದನ್ನೂ ಓದಿ:ಆಕೆಗೆ 72 ವರ್ಷ ಆತನಿಗೆ 78 ವರ್ಷ: ಭೇಟಿಯಾದ ಗ್ರೋಸರಿ ಸ್ಟೋರ್ ನಲ್ಲೇ ಮದುವೆಯಾದ ಜೋಡಿ.!
ನಿರೂಪಣೆ ಹಾಗೂ ನಟನೆಯಲ್ಲೂ ಮಿಂಚಿರುವ ಅನಸೂಯ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಗ್ಲಾಮರಸ್ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ಇದನ್ನೇ ಕೆಲವರು ಬಳಸಿಕೊಂಡು ನಟಿಯ ಫೋಟೋಗಳನ್ನು ನಕಲಿ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇದೇ ವರ್ಷದ ಆಗಸ್ಟ್ ನಲ್ಲಿ ನಟಿಯನ್ನು ನೆಟ್ಟಿಗರು ʼಆಂಟಿʼಯೆಂದು ಟ್ರೋಲ್ ಮಾಡಿದ್ದರು. ಟ್ರೋಲ್ ಮಾಡಿದವರ ವಿರುದ್ಧ ನಟಿ ಎಚ್ಚರಿಕೆ ನೀಡಿದ್ದರು. ಈಗ ನಕಲಿ ಖಾತೆಯನ್ನು ಬಳಸಿ ಆಶ್ಲೀಲವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Related Articles
ಇದರ ಬಗ್ಗೆ ನಟಿ ಅನುಸೂಯ ಪೊಲೀಸರಿಗೆ ದೂರು ನೀಡಿದ್ದು, ಪಂಢರಿ ರಾಮ ವೆಂಕಟ ವೀರರಾಜು ಎಂಬುವನನ್ನು ಬಂಧಿಸಿದ್ದಾರೆ. ಈತ ಸಾಯಿ ರವಿ ಎಂಬ ಖಾತೆಯಲ್ಲಿ ಅನಸೂಯ ಅವರ ಅಶ್ಲೀಲ ಫೋಟೋಗಳನ್ನು ಹಂಚಿಕೊಂಡು, ಕೆಲ ಕೆಟ್ಟ ಕಮೆಂಟ್ ಗಳನ್ನು ಹಾಕುತ್ತಿದ್ದ ಎಂದು ವರದಿ ತಿಳಿಸಿದೆ.