Advertisement
ರಾಜ್ಯಪಾಲರು ಪ್ರಮಾಣ ವಚನ ಬೋಧಿ ಸುತ್ತಿದ್ದಂತೆಯೇ ಶಿಂಧೆಯವರು ಭಾಷಣ ಆರಂಭಿ ಸಿದರು. 40 ಸೆಕೆಂಡ್‌ಗಳ ಕಾಲ ಮಾತಾಡುತ್ತಿದ್ದಂ ತೆಯೇ ವೇದಿಕೆಯಲ್ಲಿದ್ದ ಪ್ರಧಾನಿ ಮೋದಿ, ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಸೇರಿ ಗಣ್ಯರು ಮುಖ ಮುಖ ನೋಡಿಕೊಂಡರು. ಕೂಡಲೇ ಮಧ್ಯಪ್ರವೇಶಿಸಿದ ರಾಜ್ಯಪಾಲರು ಪ್ರತಿಜ್ಞಾ ವಿಧಿ ಹೇಳುವಂತೆ ಸೂಚಿಸಿದರು. ಕೂಡಲೇ ತಮ್ಮ ತಪ್ಪು ಅರಿತುಕೊಂಡು ಶಿಂಧೆಯವರು ಪ್ರಮಾಣ ವಚನ ಸ್ವೀಕಾರ ಮುಂದುವರಿಸಿದರು.
ಮಹಾಯುತಿ ಸರಕಾರದಲ್ಲಿ ಬಿಜೆಪಿಯ 22 ಮಂದಿಗೆ, ಶಿವಸೇನೆ ಹಾಗೂ ಎನ್‌ಸಿಪಿಯಿಂದ ಕ್ರಮವಾಗಿ 12 ಹಾಗೂ 10 ಮಂದಿಗೆ ಸಚಿವರ ಪಟ್ಟ ಸಿಗುವ ನಿರೀಕ್ಷೆ ಇದೆ. ವಿಶೇಷವಾಗಿ ಏಕನಾಥ ಶಿಂಧೆ ಅವರು ಗೃಹ ಮತ್ತು ನಗರಾಭಿವೃದ್ಧಿ ಖಾತೆಗಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿಯಿಂದ ಆಶೀಶ್ ಶೆಹ್ಲಾರ್, ಗಿರೀಶ್ ಮಹಾಜನ್, ರಾಹುಲ್ ನರ್ವೇಕರ್, ನಿತೇಶ್ ರಾಣೆ ಹೆಸರಿದ್ದರೆ, ಎನ್‌ಸಿಪಿಯಲ್ಲಿ ದತ್ತಾತ್ರೇ ಭರಣೇ, ಛಗನ್ ಭುಜಬಲ್ ಹೆಸರು ಮುನ್ನೆಲೆಯಲ್ಲಿದೆ. ಶಿವಸೇನೆಯಿಂದ ಸಂಜಯ್ ರಾಥೋಡ್, ಉದಯ್ ಹೆಸರು ಕೇಳಿಬರುತ್ತಿದೆ. ಮುಂದಿನ ವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.
Related Articles
ಸತತ 6ನೇ ಬಾರಿಗೆ ಶಾಸಕರಾಗಿ, 3ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಫಡ್ನವೀಸ್ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇದು ನಿಜಕ್ಕೂ ಶುಭದಿನ. ನಾವೆಲ್ಲರೂ ಬಹಳ ಖುಷಿಯಾಗಿದ್ದೇವೆ ಅದರ ಜತೆಯಲ್ಲೇ ಗುರುತರ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗಿದೆ. – ಅಮೃತಾ ಫಡ್ನವೀಸ್, ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ
Advertisement
ಪದಗ್ರಹಣದಲ್ಲಿ ಉದ್ಯಮಿಗಳು, ತಾರೆಗಳ ದಂಡು
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ, ಕುಮಾರಮಂಗಳಂ ಬಿರ್ಲಾ, ದಿಲೀಪ್ ಸಂಘ್ವೀ, ಆಶಿಶ್ ಚೌಹಾಣ್ ಸೇರಿದಂತೆ ಅನೇಕ ಮಂದಿ ಉದ್ಯಮಿಗಳು, ಕೈಗಾರಿಕ ದಿಗ್ಗಜರು ಮಹಾರಾಷ್ಟ್ರ ಸಿಎಂ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಕೇಶ್ ಅಂಬಾನಿ ಅವರ ಜತೆಗೆ ಅವರ ಸಹೋದರ ಅನಿಲ್ ಅಂಬಾನಿ ಹಾಗೂ ಪುತ್ರ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಕೂಡ ಸಮಾರಂಭದಲ್ಲಿದ್ದರು. ಇನ್ನು ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್ ರಣವೀರ್ ಸಿಂಗ್, ವಿದ್ಯಾ ಬಾಲನ್, ವಿಕ್ಕಿ ಕೌಶಲ್, ಜಾಹ್ನವಿ ಕಪೂರ್, ಬೋನಿ ಕಪೂರ್ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗುವ ಮೂಲಕ ಸಮಾರಂಭದ ಮೆರುಗು ಹೆಚ್ಚಿಸಿದ್ದರು.