ಭಾಲ್ಕಿ: ತಾಲೂಕಿನ ದಕ್ಷಿಣ ಕಾಶಿಯಂದೇ ಪ್ರಸಿದ್ಧಿಯಾದ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಶುಕ್ರವಾರ ತಾಲೂಕಿನ ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಬಗ್ಗೆ ಆಣೆ ಪ್ರಮಾಣ ಮಾಡಿದರು.
ಸತತ ಮೂರು ಚುನಾವಣೆಗಳಲ್ಲಿ ತಮ್ಮವರ ವೈಮನಸ್ಸಿನಿಂದಲೇ ಪಕ್ಷ ತಮ್ಮ ಸ್ಥಾನ ಕಳೆದುಕೊಂಡಿದೆ ಎಂದು ಮನಗಂಡ ತಾಲೂಕಿನ ಬಿಜೆಪಿಯ ಎಲ್ಲಾ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳು ಪಕ್ಷ ಯಾರಿಗೇ ಟಿಕೆಟ್ ಕೊಟ್ಟರು, 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವುಗಿಗಾಗಿ ದುಡಿಯುತ್ತೇವೆ ಎನ್ನುವ ಪ್ರಮಾಣ ಮಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಜಿಲ್ಲಾ ವರಿಷ್ಠರಾದ ಈಶ್ವರಸಿಂಗ್ ಠಾಕೂರ, ಅರಿಹಂತ ಸಾವಳೆ, ಕಿರಣ ಪಾಟೀಲ, ಶಿವಾನಂದ ಗಂದಗೆ, ತಾಲೂಕು ಅಧ್ಯಕ್ಷ ಪಂಡಿತ ಶಿರೋಳೆ ಅವರ ಸಮ್ಮುಖದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ, ಡಾ| ದಿನಕರ ಮೋರೆ, ಜನಾರ್ಧನ ಬಿರಾದಾರ, ಧೋಂಡಿಬಾ ಚಾಂದಿವಾಲೆ ಹಾಗು ಬಿಜೆಪಿ ತಾ ಲೂಕು ಘಟಕದ ಪ್ರಮುಖರಾದ ಶಿವು ಲೋಖಂಡೆ, ವಿಜಯಕುಮಾರ ಕಣಜಿ, ಯಾದವರಾವ ಕನಸೆ, ವೀರಣ್ಣಾ ಕಾರಬಾರಿ, ಪ್ರಭುರಾವ ಧೂಪೆ, ಪ್ರವೀಣ ಸಾವರೆ, ಸಂತೋಷ ಪಾಟೀಲ ರವರು ಮಲ್ಲಣ್ಣಾ ದೇವರು ಮತ್ತು ತಮ್ಮ ತಮ್ಮ ಮನೆದೇವರ ಆಣೆ ಮಾಡಿ ಬಿಜೆಪಿ ಗೆಲುವಿಗಾಗಿ ದುಡಿಯುವುದಾಗಿ ಪ್ರಮಾಣ ಮಾಡಿದರು.
ಪ್ರಮಾಣ ವಚನವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಿಹಂತ ಸಾವಳೆ ಬೋಧಿಸಿದರು.