Advertisement

ನೈಕಾ ಕಂಪನಿ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಭಾರತದ ಶ್ರೀಮಂತ ಮಹಿಳೆ

08:43 PM Sep 21, 2022 | Team Udayavani |

ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರನ್ನು ಹಿಂದಿಕ್ಕಿ ನೈಕಾ ಕಂಪನಿ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಅವರು ಸ್ವಂತ ಬಲದಿಂದ ಮೇಲೆ ಬಂದ ಭಾರತದ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

Advertisement

ಐಐಎಫ್ಎಲ್‌ ವೆಲ್ತ್‌ ಹುರುನ್‌ ಭಾರತದ ಶ್ರೀಮಂತರ ಪಟ್ಟಿ-2022 ಬಿಡುಗಡೆಗೊಳಿಸಿದ್ದು, ಅದರ ಪ್ರಕಾರ ಫ‌ಲ್ಗುಣಿ ನಾಯರ್‌ ದೇಶದ ಶ್ರೀಮಂತ ಮಹಿಳೆಯಾಗಿದ್ದಾರೆ.

ಇವರ ನಂತರದ ಸ್ಥಾನದಲ್ಲಿ ರೇರ್‌ ಎಂಟರ್‌ಪ್ರೈಸಸ್‌ನ ರೇಖಾ ಜುಂಜುನ್‌ವಾಲಾ ಅವರಿದ್ದಾರೆ. ಇವರು ಇತ್ತೀಚೆಗೆ ಮಡಿದ ಉದ್ಯಮಿ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿಯಾಗಿದ್ದಾರೆ.

ಈ ವರ್ಷ ಫ‌ಲ್ಗುಣಿ ನಾಯರ್‌ ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯ 30,000 ಕೋಟಿ ರೂ.ಗಳಷ್ಟು ಹೆಚ್ಚಿದ್ದು, ಒಟ್ಟು ಆಸ್ತಿ ಮೌಲ್ಯ ಸುಮಾರು 38,700 ಕೋಟಿ ರೂ. ಎಂದು ವರದಿ ತಿಳಿಸಿದೆ.

 

Advertisement

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next