Advertisement

ಹಿಂದುಳಿದ ತಾಲೂಕಿನ ಶಾಲೆ ವಿದ್ಯಾರ್ಥಿಗಳಿಗೆ ಪೌಷ್ಟಿಕ ಹಾಲು

12:04 PM Aug 03, 2018 | |

ಚಿಂಚೋಳಿ: ಪಟ್ಟಣದ ಹತ್ತು ಶಾಲೆಗಳ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ತಾಲೂಕಿನ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ಕ್ಷೀರಭಾಗ್ಯದ ಹಾಲಿನ ಜತೆಗೆ ಪೌಷ್ಟಿಕಾಂಶವುಳ್ಳ ಹಾಲಿನ ಪುಡಿಯ ಪ್ಯಾಕೇಟ್‌ನ್ನು ಪ್ರಾಯೋಗಿಕವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ| ಡಿ. ಷಣ್ಮುಖ ತಿಳಿಸಿದ್ದಾರೆ.

Advertisement

ಚಂದಾಪುರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಹಾಲಿನ ಪಾಕೇಟ್‌ ವಿತರಿಸಿ ಅವರು ಮಾತನಾಡಿದರು.  ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕುಗಳನ್ನು ಟ್ರಸ್ಟ್‌ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದರು. ಚಿಂಚೋಳಿ ಪಟ್ಟಣದ ಸರಕಾರಿ ಹಿರಿಯ ಶಾಲೆ ಉರ್ದು ಚಂದಾಪುರ, ಮೌಲಾನಾ ಆಜಾದ ವಸತಿ ಶಾಲೆ, ಆಶ್ರಯ ಕಾಲೋನಿಯ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗು ನಾಯಕ ತಾಂಡಾ, ಚಿಂಚೋಳಿಯ ಸರಕಾರಿ
ಕೇಂದ್ರ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಶಾಲೆ (ಕನ್ಯಾ), ಸರಕಾರಿ ಹಿರಿಯ ಉರ್ದು ಶಾಲೆ, ಹರಿಜನವಾಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಾಯೋಗಿಕವಾಗಿ ಹಾಲಿನ ಪ್ಯಾಕೇಟ್‌ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಚಿಂಚೋಳಿಯ ಕಸ್ತೂರಿಬಾ ಗಾಂಧಿ ಬಾಲಕಿ ವಸತಿ ಶಾಲೆ ಭೇಟಿ ನೀಡಿ, ಬಾದಾಮಿ ಹಾಲು ನೀಡದಂತೆ ಸೂಚಿಸಿದ್ದೇನೆ. ಕ್ಷೀರಭಾಗ್ಯ ಯೋಜನೆ ಅಡಿ ಹಾಲು ನೀಡಬೇಕೆಂದು ತಿಳಿಸಿದ್ದೇನೆ.

ಅಲ್ಲದೇ ಶಾಲೆ ಬಿಟ್ಟ ಮಕ್ಕಳ ಜೊತೆಗೆ ನಿರ್ಗತಿಕ ಮತ್ತು ಅನಾಥ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಬಡತನದಿಂದ ಕೂಡಿರುವ ಬಾಲಕಿಯರನ್ನು ಗುರುತಿಸಿ ಅಂತಹ ಮಕ್ಕಳಿಗೆ ಶಾಲೆಯಲ್ಲಿ ಸೇರಿಸಿಕೊಂಡು ವಿದ್ಯಾಭ್ಯಾಸ
ನೀಡಬೇಕೆಂದು ಅಲ್ಲಿನ ಮೇಲ್ವಿಚಾರಕಿಯರಿಗೆ ಆದೇಶಿಸಿದ್ದೇನೆ ಎಂದು ಹೇಳಿದರು. 

ನಿರ್ದೇಶಕ ಗಜಾನನ ಮನ್ನಿಕೇರಿ, ಬಿಆರ್‌ಸಿ ರಾಚಪ್ಪ ಭದ್ರಶೆಟ್ಟಿ, ಮಧ್ಯಾಹ್ನ ಬಿಸಿಯೂಟಯೋಜನಾಧಿಕಾರಿ ಜಯಪ್ಪ ಚಾಪೆಲ್‌, ಸಿಆರ್‌ಸಿ ಮಹಮ್ಮದ ಮುಬೀನ್‌, ಮುಖ್ಯಶಿಕ್ಷಕ ರಘು ರಾಠೊಡ, ಪೌಷ್ಟಿಕಾಂಶ ಅಧಿಕಾರಿ ಶಿವಯೋಗಿ ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next