ಪುತ್ತೂರು/ಸವಣೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ನಾಗಾಲೋಟ ಮುಂದುವರಿದಿದ್ದು ಗುರುವಾರ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 505 ರೂ.ಗಳಿಗೆ ಖರೀದಿಯಾಗಿದೆ.
ಬೆಳ್ಳಾರೆಯಲ್ಲಿ ಗುರುವಾರ 505ಕ್ಕೆ ಅಡಿಕೆ ಖರೀದಿಯಾಗಿದೆ. ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲಿಯೇ ದಾಖಲೆಯ ಧಾರಣೆ ಇದಾಗಿದೆ. ಹಳೆ ಅಡಿಕೆ ಹಾಗೂ ಹೊಸ ಅಡಿಕೆ ಎರಡೂ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 480 ರೂ.ಗಳ ದರವಿತ್ತು.
ಉತ್ತರ ಭಾರತದಲ್ಲಿ ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನಷ್ಟು ಬೆಲೆ ಏರಿಕೆಯ ನಿರೀಕ್ಷೆ ಹೊಂದಿರುವ ಬೆಳೆಗಾರರು ಉತ್ತಮ ಧಾರಣೆ ಬಂದರೂ ಹೊಸ ಅಡಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ,
ತೆಂಗಿನಕಾಯಿ ಧಾರಣೆ ಇಳಿಕೆ:
ಈ ನಡುವೆ ತೆಂಗಿನಕಾಯಿ ಬೆಲೆ ಕುಸಿತ ಕಂಡಿದೆ. ಹಸಿ ತೆಂಗಿನಕಾಯಿಗೆ ಕಿಲೋಗೆ 30-31 ರೂ., ಒಣ ತೆಂಗಿನಕಾಯಿಗೆ 30 ರೂ. ನಿಂದ 32 ರೂ. ವರೆಗೆ ಇಳಿದಿದೆ. ಈ ಹಿಂದೆ ಹಸಿ ತೆಂಗಿನಕಾಯಿಗೆ ಕಿಲೋಗೆ 45 ರೂ.ವರೆಗೆ ತಲುಪಿತ್ತು. ಎರಡು ತಿಂಗಳ ಹಿಂದೆ ಇದೇ ರೀತಿ ಬೆಲೆ ಕುಸಿದಿದ್ದರೂ ಬಳಿಕ ಮತ್ತೆ ಏರಿಕೆಯಾಗಿತ್ತು.