Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡಬಲ್ ಚೋಲು ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರು ಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ. ರಬ್ಬರ್ ಮತ್ತೆ ಇಳಿಕೆ
ರಬ್ಬರ್ ಬೆಲೆಯಲ್ಲಿ ಈ ವಾರ ಮತ್ತೆ ಇಳಿಕೆ ಕಂಡು 122 ರೂ.ಗೆ ಖರೀದಿಯಾಗಿದೆ. ಕಳೆದ ವಾರ 126 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಖರೀದಿಯಾಗಿತ್ತು. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ನ ಬೆಲೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿದೆ. ಈ ವಾರ ಮತ್ತಷ್ಟು ಧಾರಣೆ ಇಳಿಕೆಯಾಗಿದೆ.
Related Articles
Advertisement
ತೆಂಗು ಧಾರಣೆ ಸ್ಥಿರಕಳೆದ ವಾರ ಹೊಸ ತೆಂಗಿನ ಕಾಯಿ 31 ಮತ್ತು 32 ರೂ. ತನಕ ಖರೀದಿಯಾಗಿತ್ತು. ಈ ವಾರ ತೆಂಗಿನ ಕಾಯಿಗೆ ಅದೇ ಧಾರಣೆ ಮುಂದುವರೆದಿದೆ. ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯದಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರವೂ 45-48 ರೂ.ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ಆದರೆ ಈಗ ಮಾತ್ರ ಬೆಲೆ ಇಳಿಕೆಯಲ್ಲಿದೆ.