Advertisement

ಮೆಣಸಿನಕಾಯಿ ಬೆಳೆಗೆ ನುಶಿ ರೋಗ

01:45 PM Jan 21, 2022 | Team Udayavani |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮೂರುವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಣಸಿನಕಾಯಿ ಬೆಳೆಗೆ ನುಶಿ ರೋಗ ಬಾಧೆ ಆವರಿಸಿದೆ. ಇದು ರೈತರನ್ನು ಮತ್ತಷ್ಟು ನಷ್ಟದ ದವಡೆಗೆ ಸಿಲ್ಲಿಕ್ಕಿಸಿದೆ.

Advertisement

ಮೆಣಸಿನಕಾಯಿ ಹೂವು ಬಿಡುವ ವೇಳೆ ನುಶಿ ರೋಗದಿಂದ ಗಿಡದಲ್ಲಿ ಕಾಯಿ ಮೂದುಡಿ ಬೀಳುತ್ತಿವೆ. ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಕೆಲ ಗ್ರಾಮಗಳಿಗೆ ವಿಶ್ವ ವಿದ್ಯಾಲಯ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಗ ತಡೆಗಟ್ಟಲು ಔಷಧ ಸಿಂಪರಣೆ ಕುರಿತು ಜಾಗೃತಿ ಮೂಡಿಸಿದ್ದಾರೆ.

ನಾರಾಯಣಪುರ ಬಲದಂಡೆ ನೀರಾವರಿ ಸೌಲಭ್ಯ ಹೊಂದಿದ ಬಳಿಕ ಶೇ.85ರಷ್ಟು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿಟ್ಟು ಬಿಟ್ಟು ಸುರಿದ ಮಳೆ, ತೇವಾಂಶ, ಮೋಡ ಕವಿದ ವಾತಾವರಣ ಹಿನ್ನೆಲೆ ಮೆಣಸಿನಕಾಯಿಗೆ ನುಶಿ ರೋಗ ಬಾಧೆ ಕಾರಣ ಎನ್ನಲಾಗುತ್ತಿದೆ.

ಮೆಣಸಿನಕಾಯಿ ಒಬ್ಬತ್ತು ತಿಂಗಳ ಕಾಲ ಬೆಳೆ ಇದ್ದರಿಂದ ನೀರು, ಔಷಧ, ಗೊಬ್ಬರ, ಕೂಲಿ ಕಾರ್ಮಿಕರ ಅವಶ್ಯತೆ ಸೇರಿ ಸಾವಿರಾರು ರೂ. ಖರ್ಚು ಮಾಡಲಾಗಿದೆ. ಕಳೆದ ವಾರದಿಂದ ಮೋಡ ಕವಿದ ವಾತಾವರಣ ಹಿನ್ನೆಲೆ ಮೆಣಸಿನಕಾಯಿ ಬೆಳೆಗೆ ನುಶಿ ರೋಗ ತಗುಲಿದೆ.

ಮೆಣಸಿನಕಾಯಿ ಬೆಳೆಗೆ ನುಶಿ ರೋಗ ಬಾಧೆ ಆವರಿಸಿದೆ. ಕೆಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ವಾರದಿಂದ ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆಗಳಿಗೆ ರೋಗ ತಾಕಿದೆ. -ಭೀಮರಾವ್‌ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ದೇವದುರ್ಗ

Advertisement

ಕೊಪ್ಪರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರೈತರು ಬೆಳೆದ ಮೆಣಸಿನಕಾಯಿ ಗಿಡ. ಲಕ್ಷಾಂತರ ರೂ. ವೆಚ್ಚ ಮಾಡಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ನುಶಿ ರೋಗ ಬಾಧೆ ಹಿನ್ನೆಲೆ ಚಿಂತೆ ಮಾಡುವಂತಾಗಿದೆ. ಕಾಯಿ ಬಿಡುವ ವೇಳೆ ರೋಗ ತಗಲಿದ್ದು, ನಷ್ಟ ಎದುರಿಸಬೇಕಿದೆ. -ದೇವಿಂದ್ರಪ್ಪ ಸ್ವಾಸಿಗೇರಾ, ರೈತ

Advertisement

Udayavani is now on Telegram. Click here to join our channel and stay updated with the latest news.

Next