Advertisement

ಶೀಘ್ರದಲ್ಲೇ ನರ್ಸರಿಗಳನ್ನು ಪ್ರಾರಂಭಿಸುತ್ತೇವೆ : ಕೇಜ್ರಿವಾಲ್

06:36 PM Feb 02, 2021 | Shreeraj Acharya |

ನವ ದೆಹಲಿ : ಕೋವಿಡ್ ಆತಂತಕ ನಡುವೆ ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರ ಈಗ ನರ್ಸರಿಗಳನ್ನು ತೆರೆಯಲು ಮುಂದಾಗಿದೆ.

Advertisement

ಕೋವಿಡ್ ಕಾರಣದಿಂದಾಗಿ ನರ್ಸರಿಗಳು ಮುಚ್ಚಿ ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಹಲವು ಕಾರಣದಿಂದ ನರ್ಸರಿಗಳನ್ನು ತೆರೆಯುವ ಕುರಿತಾದ ಪ್ರಕ್ರಿಯೆಗಳು ನಿಧಾನಗತಿ ಕಂಡಿದೆ. ಆದಷ್ಟು ಶೀಘ್ರದಲ್ಲಿ ನರ್ಸರಿಗಳನ್ನು ಪುನರಾರಂಭಿಸುತ್ತೇವೆ ಮತ್ತು ಪ್ರವೇಶಾತಿಯ ದಿನಾಂಕ ನಿಗದಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ(ಫೆ. 2) ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಓದಿ :ಸಿದ್ದರಬೆಟ್ಟ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ

ಸಾಮಾನ್ಯವಾಗಿ, ರಾಜಧಾನಿಯಲ್ಲಿನ ಸುಮಾರು 1700 ನರ್ಸರಿಗಳ ಪ್ರವೇಶಾರಾಂಭ ನವೆಂಬರ್ ಕೊನೆಯ ವಾರದಲ್ಲಿ ಆಗುತ್ತದೆ. ಈ ಭಾರಿ ಕೋವಿಡ್ ಸಮಸ್ಯೆಯ ಕಾರಣದಿಂದಾಗಿ ಪುನರಾರಂಭಿಸಲು ಆಗಿರಲಿಲ್ಲ. ಶಿಕ್ಷಣ ನಿರ್ದೇಶನಾಲಯ (ಡಿಒಇ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಅಗತ್ಯ ಮಾಹಿತಿಯನ್ನು ಒದಗಿಸಲು ಶಾಲೆಗಳಿಗೆ ಸೂಚಿಸಲಾಗುತ್ತದೆ. ಆ ನಂತರ ಸಾಮಾನ್ಯವಾಗಿ ಡಿಸೆಂಬರ್‌ ನಲ್ಲಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ.

ಕೋವಿಡ್ ಸೋಂಕಿನ ಸಮಸ್ಯೆಯಿಂದಾಗಿ ಸರಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಶಾಲೆಗಳನ್ನು ಮುಚ್ಚಲಾಗಿತ್ತು, ಲಸಿಕೆ ಲಭ್ಯವಾಗುವವರೆಗೆ ಶಾಲೆಗಳನ್ನು ಮುಚ್ಚಲಾಗುವುದು, ಸಣ್ಣ ಮಕ್ಕಳಿಗೆ ಆನ್‌ ಲೈನ್ ಕಲಿಕೆ ಸಂಪೂರ್ಣ ವರ್ಷ ಅಸಾಧ್ಯವೆಂದು ತೋರುತ್ತದೆ. ಈ ವರ್ಷ ನರ್ಸರಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಬಾರದು ಎಂದು  ಶಾಲಾ ಪ್ರಾಂಶುಪಾಲರುಗಳ ಸಮಿತಿ ಹೇಳಿತ್ತು.

Advertisement

ಆದರೆ, ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಳೆದ ತಿಂಗಳು ನರ್ಸರಿ ಶಾಲೆಗಳು ತೆರೆಯುವ ಮತ್ತು ಪ್ರವೇಶಾತಿ ಆರಂಭಿಸುವ ಬಗ್ಗೆ ಇದ್ದ ಭಿನ್ನಾಭಿಪ್ರಾಯವನ್ನು ತಳ್ಳಿಹಾಕಿದ್ದರು.

ಓದಿ :ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಕೇವಲ ಎರಡು ಆಯ್ಕೆಗಳಿವೆ :ಅಶೋಕ್ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next