Advertisement

ನೂಪುರ್‌ ಶರ್ಮಗೆ ಗನ್‌ ಲೈಸನ್ಸ್‌

06:59 PM Jan 12, 2023 | Team Udayavani |

ನವದೆಹಲಿ:  ಬಿಜೆಪಿಯ ವಕ್ತಾರ ಹುದ್ದೆಯಿಂದ ಸಸ್ಪೆಂಡ್‌ ಆಗಿರುವ ನೂಪುರ್‌ ಶರ್ಮ ಅವರಿಗೆ ಪಿಸ್ತೂಲು ಇರಿಸಿಕೊಳ್ಳಲು ಪರವಾನಗಿ ಸಿಕ್ಕಿದೆ.

Advertisement

ಜೀವ ಬೆದರಿಕೆ ಕರೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ  ರಕ್ಷಣೆಗಾಗಿ ಗನ್‌ ಇಟ್ಟುಕೊಳ್ಳಲು ಅನುಮತಿ ಬೇಕೆಂದು ಅವರು  ದೆಹಲಿ ಪೊಲೀಸರಿಗೆ  ಅರ್ಜಿ ಸಲ್ಲಿಸಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತಿರುವ ಪೊಲೀಸರು ಅವರಿಗೆ ಅನುಮತಿ ನೀಡಿದ್ದಾರೆ.

ಕಳೆದ ವರ್ಷ ಅವರು ಭಾಗವಹಿಸಿದ್ದ ಟೀವಿ ಚರ್ಚೆಯೊಂದು ವಿವಾದವಾಗಿತ್ತು. ಅದರ ವಿರುದ್ಧ ದೇಶದ ಕೆಲವು ಭಾಗಗಳಲ್ಲಿ ಅಹಿತಕರ ಘಟನೆಗಳೂ ನಡೆದಿದ್ದವು. ವಿದೇಶಗಳಲ್ಲೂ ಟೀಕೆಗಳು ಕೇಳಿಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next