Advertisement

ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ 100ಕ್ಕೆ ಏರಿಕೆ: ಠಾಕ್ರೆ

11:09 AM Jun 22, 2020 | Suhan S |

ಮುಂಬಯಿ, ಜೂ. 21: ರಾಜ್ಯದ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಇದು ಮೊದಲ ಹಂತವಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಯೋಗಾಲಯಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾತ್ತದೆ ಎಂದು ಭರವಸೆ ನೀಡಿದ್ದಾರೆ.

Advertisement

ಶಿವಸೇನೆ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳನ್ನು ಆನ್‌ಲೈನ್‌ ನಲ್ಲಿ ಉದ್ದೇಶಿಸಿ ಮಾನಾಡಿದ ಅವರು, ವೈದ್ಯರಿಗೆ ಮುಖವಸ್ತ್ರ, ಪಿಪಿಇ ಕಿಟ್‌ ಗಳು ಮತ್ತು ಕೈಗವಸುಗಳಂತಹ ಅಗತ್ಯ ಸಾಧನಗಳನ್ನು ಒದಗಿಸಲಾಗುತ್ತಿದೆ ಎಂದು ವಿಚಾರಿಸಿದರು. ಗಾಲ್ವಾನ್‌ ವ್ಯಾಲಿ ಘರ್ಷಣೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.

ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಅವರು ಯಾವುದೇ ಬಿಕ್ಕಟ್ಟಿಗೆ ಶಿವಸೈನಿಕರು ಹೆದರುವವರಲ್ಲ. ಅವರು ಎಲ್ಲವನ್ನೂ ಬಿಟ್ಟು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಚಂಡಮಾರುತ ಅಥವಾ ಇನ್ನಾವುದೇ ಬಿಕ್ಕಟ್ಟು ಇರಲಿ ನಿಮ್ಮಂತಹ ಶಿವ ಸೈನಿಕರು ನನ್ನೊಂದಿಗೆ ಇರುವವರೆಗೂ ಹೆದರುವುದಿಲ್ಲ ಎಂದರು. ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಕೂಡ ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ದೇಶದ ಪ್ರತಿ ರಾಜ್ಯದಲ್ಲಿ ಪಕ್ಷದ ನೆಲೆಯನ್ನು ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next